ಮಳೆಯ ಸಿಂಚನ...

ಈ ಮಳೆ ಸುರಿದಾಗಲೆಲ್ಲಾ... ಆ ಹಳೆಯ ನೆನಪುಗಳಿಗೆಲ್ಲಾ ಒಂದು ಕಥಾ ರೂಪವನ್ನು ಕೊಡುವ ಮನಸ್ಸಾಗುತ್ತದೆ... ಸಮಯದ ಕೊರತೆ..ಹಾಗೂ ಹುಟ್ಟುಗುಣವಾದ ಸೋಮಾರಿತನ... ಇವತ್ತು ನೋಡೇ ಬಿಡೋಣ ಅಂತಾ ಬರೆಯಲಿಕ್ಕೆ ಕೂತಿದ್ದೇನೆ.

ಮಳೆ ಮತ್ತು ನೆನಪುಗಳು....

ಬಿಡದೇ ಸುರಿಯುತ್ತಿರುವ ಮಳೆ...ಯಾವ ಕಡೆ ಹೋಗೋದು ಅಂತಾ ದಿಕ್ಕೂ ಕೂಡ ತೋಚದೆ, ಜೆನ್ ಕಾರು ಯಾವ ಕಡೆ ತಿರುಗಿತೋ...ಅದರಂತೆ ಹಾಗೇ ಸುಮ್ಮನೆ ಹೋಗಿ ರಸ್ತೆ ಪಕ್ಕದ ಒಂದು ತಡೆಗೋಡೆ ಹತ್ತಿರ ಕಾರು ನಿಲ್ಲಿಸಿ..ಆ ಗೋಡೆ ಮೇಲೆ ಕುಳಿತು ನೋಡಿದಾಗ ಸುಹಾಸ್ ನ ತಲೆಗೆ ಬಂದಿದ್ದು...ಏನೆಲ್ಲಾ ಅಯಿತು ಇಲ್ಲಿಯವರೆಗೆ ಅಂತಾ...

ಅವತ್ತು ರಾತ್ರಿ ಅಹಮದಾಬಾದ್ ನಿಂದ ರಾತ್ರಿ ರೈಲಿಗೆ ಹತ್ತಿದಾಗಲೂ ಇದೇ ರೀತಿ ಧೋ ಅಂತಾ ಸುರಿಯುತ್ತಿತ್ತು. ಸ್ಲೀಪರ್ ಕೋಚ್ ನಲ್ಲಿ ಮಲಗಿ ಅಮ್ಮನ ಆತಂಕದ ಕಣ್ಣುಗಳನ್ನೇ ನೋಡುತ್ತಿದ್ದಾಗ, ಸುಹಾಸನಿಗಿನ್ನೂ ಕನಸುಗಳನ್ನು ಕಾಣುವ ವಯಸ್ಸು. ಅಪ್ಪ TT ಜೊತೆ ಮಾತಾಡಿ ಸ್ಲೀಪರ್ ಗೆ ವ್ಯವಸ್ಥೆ ಮಾಡಿ ಅಮ್ಮನ ಪಕ್ಕ ಬಂದು ನಿಟ್ಟುಸಿರು ಬಿಟ್ಟು ಕೂತ್ಕೊಂಡರು. "ಏನೂ ಭಯ ಇಲ್ಲ. ಮುಂದೆ ಆ ದೇವರು ಹೇಗೆ ನಡೆಸುತ್ತಾನೋ ಹಾಗೆ ನಡೆಯೋಣ" ಅಂತಾ ಹೇಳಿದರು. ಮುಂದೆ ಕೆಲವು ದಿನ ಆದಮೇಲೆ ಅಮ್ಮ ಹೇಳಿದ ರಹಸ್ಯ - ಸುಹಾಸನಿಗೆ... ಅಪ್ಪನ ಜೊತೆ ಅಪ್ಪನ ಸ್ಟೀಲ್ ಪ್ಲಾಂಟ್ ನಲ್ಲಿ ಕೆಲ್ಸ ಮಾಡುತ್ತಿದ್ದ ಸುರೇಶ್ ಏನೂ ಗೊತ್ತಿಲ್ಲದಂತೆ Manufacturing Division ನಲ್ಲಿ ಮಾಡಿದ ಕೈ ಚಳಕ, Plant ನ ಎಲ್ಲಾ Customers ಗೂ ನಷ್ಟ ತಂದು, ಎಲ್ಲರೂ ಅಪ್ಪನ ಹಿಂದೆ ಬಿದ್ದು, ಮನೆಯಲ್ಲಿದ್ದ ಎಲ್ಲಾ ಸಾಮಾನು ಸರಂಜಾಮುಗಳೂ...ಮಾರಿಕೊಂಡು... ಬ್ಯಾಂಕ್ ಬ್ಯಾಲೆನ್ಸ್... ಇದ್ದ ಅಪ್ಪನ ಹಾಗೂ ಸುಹಾಸನ ನೆಚ್ಚಿನ ಟಾಟಾ ಸಫಾರಿ ಹಾಗೂ ಮಾರುತಿ ಜೆನ್..ಎಲ್ಲವನ್ನೂ ಮಾರಿಕೊಂಡು...ಇಷ್ಟಾದರೂ ಸಹಾ ಆಗಿದ್ದ ನಷ್ಟವನ್ನು ಪೂರ್ತಿ ಭರಿಸಲು ಸಾಧ್ಯವಾಗದೇ ಇದ್ದಾಗ ಬೇರೆ ದಾರಿ ಕಾಣದೇ, ಬೆಂಗಳೂರಿನ ದಾರಿ ಹಿಡಿದದ್ದಂತೆ. ಇಷ್ಟಾದ ಮೇಲೂ ಇನ್ನೂ ಕೆಲವರು ಬೆಂಗಳೂರಿನ contacts ಹಿಡಿದು...ಸಿಕ್ಕಿದರೆ ನಿಮ್ಮ ಮಗನನ್ನು kidnap ಮಾಡುತ್ತೀವಿ ಅಂತೆಲ್ಲಾ ಭಯ ಹುಟ್ಟಿಸಿ ಸುಹಾಸನ ಅಪ್ಪ ಅಮ್ಮನನ್ನು ಭಯದ ನೆರಳಿನಲ್ಲೆ ಕಾಲ ಕಳೆಯುವಂತೆ ಮಾಡಿದ್ದರು.

ಅದೆಲ್ಲಾ ಈಗ ಒಂದು ಸಿನಿಮಾ ಕಥೆಯಂತೆ ಭಾಸವಾಗುತ್ತಿದ್ದರೂ ಸೂರ್ಯ ಚಂದ್ರನಷ್ಟೆ ನಿಜ ಎನ್ನುವುದು ಸುಹಾಸ್ ಗೆ ಗೊತ್ತಿಲದೇ ಇರಲಿಲ್ಲ. ಬೆಂಗಳೂರಿಗೆ ಬಂದ ದಿನಗಳಲ್ಲಿ... ಪಟ್ಟ ಕಷ್ಟಗಳು... ಸಂಬಂಧಿಕರ ಚುಚ್ಚು ಮಾತು... ನಿಂದನೆಗಳು... ಕಾಸು ಕಾಸು ಖರ್ಚು ಮಾಡುವ ಮುಂಚೆ ಯೋಚಿಸಿದ್ದು, ತಿಂಗಳಿಗೆ ಅಪ್ಪ ಕೊಡುತ್ತಿದ್ದ ಪಾಕೆಟ್ ಮನಿಯಲ್ಲೇ, freinds birthday parties...gifts..canteeen...ಇವೆಲ್ಲಾ ತೂಗಿಸಿಕೊಂಡು ಹೋಗುತ್ತಿದ್ದು ಎಲ್ಲಾ ನೆನಪಿಗೆ ಬಂದಿತ್ತು...

ಬೆಂಗಳೂರಿಗೆ ಬಂದ ತಕ್ಷಣ, ಅಪ್ಪ ಹಾಗು ಅಮ್ಮನಿಗೆ ತಮ್ಮ ತಮ್ಮ ಕೆಲಸ ಹುಡುಕುವುದರ ಜೊತೆಗೆ ಈ ಸುಹಾಸ್ ನ ಭವಿಷ್ಯಕ್ಕೆ ಯಾವ ಕಾಲೇಜ್ ಗೆ ಸೇರಿಸುವುದು..ಹಣ ಕಾಸಿನ ಲೆಕ್ಕಾಚಾರ... ಇವೆಲ್ಲಾ ಕೂಡ ಬೇರೆ ತಲೆ ನೋವಾಗಿತ್ತು.

ಅಂತೂ ಕೊನೇಗೆ ಒಂದು ಒಳ್ಳೆಯ ಕಾಲೇಜಿನಲ್ಲೇ ಸುಹಾಸ್ PUC ಮುಗಿಸಿ, ಎಂಜಿನಿಯರಿಂಗ್ ಕೂಡ ಮುಗಿಸಿದ್ದಾಯ್ತು. ಈ ಸಮಯದ ಹೊತ್ತಿಗೆ ಅಪ್ಪನಿಗೆ ಒಂದು ಬ್ಯಾಂಕ್ ನಲ್ಲಿ ಎಕ್ಸಿಕ್ಯುಟೀವ್ ಆಗಿ ಕೆಲಸ ಹಾಗೂ ಅಮ್ಮನಿಗೂ ಟೀಚರ್ ಆಗಿ ಕೆಲಸ ಸಿಕ್ಕು ನಾಲ್ಕೈದು ವರ್ಷಗಳೇ ಆಗಿದ್ದವು. ಸುಹಾಸ್ ನ ಓದು ಮುಗಿದ ತಕ್ಷಣ ಇದ್ದ ಎಲ್ಲಾ ಆರ್ಥಿಕ ಸಂಕಷ್ಟಗಳೂ ಮಾಯವಾಗುತ್ತೆ ಅಂತಾ ತಿಳಿದುಕೊಂಡಿದ್ದ ದಂಪತಿಗೆ...ಭ್ರಮನಿರಸನ.... ಸುಹಾಸ್ ಇಂಜಿನಿಯರಿಂಗ್ ಮುಗಿಸಿದ ಮೇಲೆ ಬರೋಬ್ಬರಿ ಒಂದು ವರ್ಷ ಮನೇಲಿ ಕೂತು Internet ನ ಸರೀಗೆ ಉಪಯೋಗಿಸಿ ಫೋನ್ ಬಿಲ್ ಜಾಸ್ತಿ ಮಾಡಿದ್ದೇ ಬಂತು. ಇದರ ಅರ್ಥ ಸುಹಾಸ್ ದಡ್ಡ ಅಂತೇನಲ್ಲ. ಬೆರಳು ತೋರಿಸಿದರೆ ಹಸ್ತ ಏನು..ಪೂರ್ತಿ ಕೈಯನ್ನೇ ನುಂಗುವ ಆಸಾಮಿ. ಯಾವುದೇ sports ನಲ್ಲಿಯು ಎತ್ತಿದ ಕೈ. General Knowledge...current affairs... ಇವೆಲ್ಲಾ ಕರತಲಾಮಲಕ. ಯಾವಾಗ ನೋಡಿದರೂ.. Friends...Sports...Parties... Treat...ಇದ್ದೇ ಇರೋವು. Friends ನಲ್ಲಿ ಹುಡುಗಿಯರ ಸಂಖ್ಯೆ ಕೂಡ ಕಮ್ಮಿ ಏನೂ ಇರಲಿಲ್ಲ. ಇಂತಿಪ್ಪ ಸುಹಾಸ್ ಕಾಲೇಜ್ ನಲ್ಲಿ ಎರಡು ಬಾರಿ Mr. Student Of the Year ಆಗಿ ಆರಿಸಿ ಬಂದಿದ್ದರಲ್ಲಿ ಆಶ್ಚರ್ಯ ಏನೂ ಇರಲಿಲ್ಲ!

ಆದರೆ ಇಲ್ಲಿ ಗ್ರಹ..ನಕ್ಷತ್ರ ಇವುಗಳ ದಿಕ್ಕಿಲ್ಲದ ಓಡಾಟದಿಂದ ಕೆಲಸ a.k.a ಸಂಪಾದನೆ ಅಂತಾ ಅನ್ನೋದು ಸುಹಾಸನಿಗೆ ದೊಡ್ಡ Question mark ಆಗಿತ್ತು. ಕೊನೇಗೆ ಅಂತೂ ಯಾರದೋ ಸಹಾಯ..ರೆಫರೆನ್ಸ್.. ಪಡೆದು ಒಂದು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಅಂತಾ ಸಿಕ್ಕು, ಐದು ಅಂಕಿಗಳ ಸಂಬಳ ಎಣಿಸಿದಾಗ, ಸುಹಾಸನ ಅಮ್ಮ ಅಪ್ಪನ ಕಣ್ಣುಗಳು ತೇವವಾಗಿದ್ದು ಕೂಡ ಸುಳ್ಳಲ್ಲ. ಅದನ್ನು ನೋಡಿ... ಸುಹಾಸ್ ಗೆ... ಅಂದು ಆ ಮಳೆಯಲ್ಲಿ...ರೈಲಿನಲ್ಲಿ... ರಾತ್ರೋರಾತ್ರಿ... ಆಡಿ ಬೆಳೆದ ಮನೆ ಬಿಟ್ಟು ಬಂದದ್ದು... ಅಲ್ಲಿನ ಗೆಳೆಯರು ಎಲ್ಲಾ ನೆನಪಾಗಿ...

ಅದೆಲ್ಲ ಬಿಡಿ. ಈವಾಗ....ಇಲ್ಲಿಂದಾ ಶುರು ಆಯಿತು ಸುಹಾಸ್ ನ ಹೊಚ್ಚ ಹೊಸಾ...ಕಥೆ.

ಓದು ಮುಗೀತು... ಜೀವನಾಧಾರಕ್ಕೆ ಕೈ ತುಂಬಾ ಕೆಲಸ...ಸಂಬಳ. . ಕಷ್ಟ ಸುಖಕ್ಕೆ ಜೀವ ಕೊಡುವ ಗೆಳೆಯರು. ವೀಕೆಂಡ್ ಬಂತು ಅಂದರೆ... ಅಲ್ಲಿ ಇಲ್ಲಿ ತಿರುಗುವುದು... ಫೋರಂ..ಅದು ಇದು ಮಾಲ್ ಗಳಲ್ಲಿ TP ಮಾಡೋದು ಬಿಟ್ಟರೆ Excitement ಅಂತಾ ಏನೂ ಹೊಸಾ ವಿಷಯ ಇರಲಿಲ್ಲ. Next Mission? ಇನ್ನೇನು... ? ಇಲ್ಲಿವರೆಗೆ ಎಷ್ಟೋ ಜನ ಹುಡುಗಿಯರು ಕಣ್ಣ ಮುಂದೆ ಬಂದು ಹೋಗಿದ್ದರೂ, Heart ಒಳಗೆ ಹೋಮ್ ಪೇಜ್ ಆಗಿ ಯಾರೂ ನಿಂತಿರಲಿಲ್ಲ. ಹಳೇ ಪುಸ್ತಕ ಅಂತಾ ಹಿಂದೆ ಪೇಜ್ ತಿರುಗಿಸಿ ನೋಡಿದರೆ, ಮೊದಲ ಹೆಸರು..."ರುಚಿತಾ!!!!" ........... ನಮ್ಮ ಸುಹಾಸ್ ಧೈರ್ಯ ಅಂತಾ ಮಾಡಿ ಮುನ್ನುಗ್ಗಿದ್ದರೆ, ಇಷ್ಟೊತ್ತಿಗೆ ರುಚಿತಾ ಜೊತೆ ಮದುವೆ ಅಲ್ಲದಿದ್ದರೂ ಕನಿಷ್ಠ ಪಕ್ಷ ಎಂಗೇಜಮೆಂಟ್ ಆದರೂ ಆಗಿರುತಿತ್ತು. ಆದರೆ ಏನ್ ಮಾಡೋದು.. "ಇಲ್ಲ ಇವಳು ನನಗಲ್ಲ. ಮನೇಲಿ ಅಮ್ಮ ಕೂಡ ಇವಳು ಬೇರೆ ಜಾತಿ ಅಂತಾ ರಾಗ ತೆಗೆದರೆ...ಅದೂ ಇದೂ...ಅಂದರೆ ಹೊಂದಾಣಿಕೆ ಕಷ್ಟ ಆಗಬಹುದು..." ಅಂತೆಲ್ಲಾ ಯೋಚಿಸಿ, ತನ್ನೆಲ್ಲಾ ಭಾವನೆಗಳನ್ನೂ ಅದುಮಿಕೊಂಡಿತ್ತಿದ್ದ. ಕೊನೇಲಿ ಒಂದು ದಿನ ರುಚಿತಾಳೇ ಬಂದು direct ಆಗಿ ಇವನ ಹತ್ತಿರ ಹೇಳಿದಾಗಲೂ ಸಹಾ... "ನೋಡೋ ಸುಹಾಸ್..ಮನೇಲಿ ಹುಡುಗನ್ನ ನೋಡೋಕೆ ಶುರು ಮಾಡುತ್ತಾ ಇದಾರೆ ನೀನು ಏನು ಹೇಳುತ್ತೀಯ? ಏನು ಮಾಡೋದು? ನಂಗಂತೂ ಅಳುನೇ ಬರುತ್ತಾ ಇದೆ" ಅಂದಾಗ... ಇವನಿಗೂ ದುಃಖ ಒತ್ತರಿಸಿಕೊಂಡು ಬಂದರೂ, ಅದನ್ನು ತೋರಗೊಡದೆ... "ಇಲ್ಲಾ ರುಚಿ...ನೀನು ಅಂದುಕೊತಾ ಇರೋದು ಆಗಲ್ಲ ಅನಿಸುತ್ತೆ... ಒಳ್ಳೇ ಹುಡುಗ ಸಿಕ್ಕಿದರೆ ಹೂಂ ಅನ್ನು" ಅಂತಾ ಹೇಳಿ. ಕೊನೇಗೆ... ಸುಪ್ರೀತ್ ಅನ್ನೋ NRI ಹುಡುಗನ ಜೊತೆ ಅವಳ ಮದುವೆ fix ಆದಮೇಲೆ.. ಅವಳ ಮದುವೆಗೆ ಎರಡು ಪೂರ್ತಿ ದಿನಾ ಅಲ್ಲೆ ಛತ್ರದಲ್ಲೇ ಇದ್ದು... Porter / Photographer / Car driver ಇವೆಲ್ಲಾ ಕೆಲಸಗಳನ್ನೂ ನೆರವೇರಿಸಿ... ಕೊನೇಗೆ ವಿಪರೀತ ಜೋರಾಗಿ ಬರುತ್ತಿದ್ದಾ ಆ ಮಳೆಯಲ್ಲಿ ಅವಳನ್ನು ಏರ್ ಪೋರ್ಟ್ ಗೆ ಡ್ರಾಪ್ ಮಾಡಲು ಹೋದಾಗ... ರುಚಿ ನೀಡಿದ ಆ ಬಿಗಿಯಾದ ಅಪ್ಪುಗೆ... Miss you ಕಣೋ ಅಂದು ಅವಳು ಜೋರಾಗಿ ಅತ್ತಿದ್ದು....ಆಗ..ಮನಸೋ ಇಚ್ಛೆ ಅವಳನ್ನೂ ತಬ್ಬಿಕೊಳ್ಳಲೂ ಆಗದೆ.... ಮಾತಲ್ಲೂ ಏನೂ ಹೇಳಲಾಗದೆ... ಹುಹ್.... luggage check in ಮಾಡಿ ಅವಳು ಒಳಗಡೆ ಹೋಗಿ...ಕಾಣದಂತಾಗ...ಬೆಪ್ ನನ್ನ ಮಗನ ಥರಾ ಮಳೇಲೇ ನೆಂದುಕೊಂಡು Tata ಮಾಡುತ್ತಾ ನಿಂತಿದ್ದ ಸುಹಾಸನಿಗೆ ಅನಿಸಿದ್ದು... "ಏನ್ ಮಾಡ್ಕೊಂಡೆ ನನ್ನ ಮಗನೆ ... ಸರೀನಾ ನಿನ್ನ decision? ಏನ್ ಮಾಡ್ತಾ ಇದ್ದೆ? ಯಾವುದೋ ಜಾತಿ ಅಂತಾ ಒಂದು ಸಣ್ಣ matter.. ನಿನ್ನ life ನಲ್ಲಿ ಇನ್ನೆಂದೂ ತುಂಬಲಾಗದ ಒಂದು ಹಳ್ಳಾನೇ ಮಾಡಿ ಹೋಗ್ತಾ ಇದ್ಯಲ್ಲೋ ಸಿಸ್ಯಾ... ಅದು ಸಾಲದೇ ಸ್ವತಃ ತಾನೇ ಅಗೆದು ಅಗೆದು ತೋಡಿಕೊಂಡಿರೋದು ಬೇರೆ ಹಳ್ಳಾನಾ! ಕರ್ಮ ಕಾಂಡ!" ಜಗ್ಗೇಶ್ ಸಿನಿಮಾದ ಕಾಮಿಡಿ ಸೀನ್ - "ಹೇಗಿದ್ದೆ!!?... ಹೇಗಾದೆ!!!" - ಅನ್ನೋ ಥರ ಆಗಿತ್ತು ಸುಹಾಸನ ಪರಿಸ್ಥಿತಿ.

ಈಗ ಇಲ್ಲಿ ಬನ್ನಿ.... ಮುಂದೆ ನೋಡೋಣ.. :)
"Suhaas.. Can we have this painting placed on the side walls near the place where the buffet would be served?!!"

ಏನಪ್ಪಾ ಇದು ಈ ಥರಾ ಕೋಗಿಲೆ voice ಇಷ್ಟು ದಿನ ಕೇಳೇ ಇರಲಿಲ್ಲವಲ್ಲ ಅಂತಾ ತಲೆ ಎತ್ತಿ ನೋಡಿದರೆ ... ಆಹ್!! ಸಿಂಚನ!! ಯಾವ ಹೆಸರು ಕೇಳಿದರೆ ಆಫೀಸಿನ ಎಲ್ಲಾ bachelor ಹುಡುಗರ ಮೈ ಒಂದು ಸಲ ಝುಮ್ ಅನ್ನುತ್ತೊ ಅವಳು..ಸಾಕ್ಷಾತ್ ಸುಹಾಸ್ ನ cubicle na ಪಕ್ಕ ನಿಂತುಕೊಂಡು! ತಲೆ ಒಂದು ಸಲಾ ಗಿಮ್!!!! ಅಂತು... ಹೊಸ ವರ್ಷದ ಪಾರ್ಟಿ ಗೆ ತಯಾರಿ ನಡೆಯುತ್ತಿದ್ದ ದಿನಗಳವು... after all ಸುಹಾಸ್ ಇಲ್ಲದಿದ್ದರೆ ಪಾರ್ಟಿ ವ್ಯವಸ್ಥೆ ಇನ್ಯಾರು ನೋಡ್ಕೊತಾರೆ? ಈ ಬಾರಿ organizing committee ನಲ್ಲಿ ಕೆಲವು ಹೊಸಾ ಮುಖಗಳನ್ನೂ ಸಹ ಸೇರಿಸಿಕೊಂಡಿದ್ದೇವೆ ಅಂತಾ HR ಹೇಳಿದ್ದು ಥಟ್ ಅಂತಾ flash ಆಯಿತು...ಆದರೆ...ಆ ಮುಖಗಳಲ್ಲಿ...ಈ ಸುಂದರವದನವೂ ಇದೆ ಅಂತಾ ಇವತ್ತೇ ಸುಹಾಸ್ ಗೆ ಗೊತ್ತಾಗಿದ್ದು!

"Oh ! Let me take a look at them.." ಅಂತಾ ಶುರು ಆಗಿ... ಪಾರ್ಟಿಯಲ್ಲಿ DJ ಜೊತೆ ಇಬ್ಬರೂ ಹೆಜ್ಜೆ ಹಾಕಿ... ಮನಸೋ ಇಚ್ಛೆ ಮಜಾ ಮಾಡಿ, ಪಾರ್ಟಿ ಲೇಟ್ ಆಗಿ ಮುಗಿದು...ಎಂದಿನಂತೆ ನಮ್ಮ ಸುಹಾಸ್ ನ ಕಥೆಯಲ್ಲಿ ಬರುವ ಮಳೆ ಬೇರೆ ಸಿಕ್ಕಾಪಟ್ಟೆ ಜಾಸ್ತಿ ಆಗಿದ್ದರಿಂದ...ಸಿಂಚನಾನ ಮನೆವರೆಗೂ ಡ್ರಾಪ್ ಮಾಡೊವರೆಗೂ ಹೋಯಿತು.

ಆಮೇಲೆ ಇದ್ದಿದ್ದೆ... Email...internal chat IM ನಲ್ಲಿ Gud mrng ಇಂದಾ ಶುರು ಆಗಿ... I'm logging off for the day ಅನ್ನೋವರೆಗೂ ಹೋಗಿ... ಆವಾಗವಾಗ ice creams... Cafe Coffee day...ನಡೀತಾ ಇತ್ತು. ಜೊತೆಗೆ ಮನೇಗೆ ಹೋದಮೇಲೆ.. Reached safely ಅಂತಾ sms ಕೂಡಾ ಬರೋಕೆ ಶುರು ಆದಾಗ...ಎಲ್ಲೋ spelling mistake ಆಗ್ತಾ ಇದೆ ಅಂತಾ ಅನಿಸಿದ್ದು.

ಸರಿ... spelling mistake ದೊಡ್ಡ grammar mistake ಆಗೋವರೆಗೂ ಮುಂದುವರೆದು... ವೀಕೆಂಡ್ಸ್ ನಲ್ಲಿ ಶಾಪಿಂಗ್ ಮಾಲ್, ಕಾಫಿ ಡೇ, ಕಾರ್ನರ್ ಹೌಸ್ ಇವರ ಬಿಸಿನಸ್ ಗೆಲ್ಲಾ ದೇಣಿಗೆ ನೀಡಿ.. ಸುಹಾಸ್ ಸಿಂಚನರೇ ಎಲ್ಲಾ ಕಡೆ ಆಗಿತ್ತು. ಎಲ್ಲಾ ಲವ್ ಸ್ಟೋರಿಗಳಲ್ಲೂ ಸಹಜವಾಗಿ ನಡೆಯುವಂತೆ, ಸಿಂಚನಾಳಂತಹಾ ಸೌಂದರ್ಯದ ಖನಿಗೆ ಕಂಡವರ ಕಾಕದೃಷ್ಟಿ ಬೀಳುತ್ತಿದೆ ಅಂತಾ ಗೊತ್ತಾಗಲಿಕ್ಕೆ ಶುರು ಆದಾಗ, ಸುಹಾಸ್ ಹಾಗೂ ಸಿಂಚನ ತಮ್ಮ ಮನೆಗಳಲ್ಲಿ ವಿಷಯ ತಿಳಿಸಿ ಸಾಧ್ಯವಾದರೆ ಮದುವೆನೂ ಬೇಗನೆ ಆಗೇ ಬಿಡುವ ಅಂತಾ ತೀರ್ಮಾನಿಸಿ matter disclose ಮಾಡಿದರು.

ಸುಹಾಸನ ಮನೆಯಲ್ಲಿ ರಾಯರು "ಹುಡುಗಿ ಒಳ್ಳೆಯವಳಾಗಿದ್ದರೆ ಸಾಕಪ್ಪ" ಅಂತಾ ಕೈ ತೊಳಕೊಂಡರೂ... ಸುಹಾಸನ ಅಮ್ಮ, ಬೇರೆ ಜಾತಿ ಅಂತಾ ಸ್ವಲ್ಪ ರಾಗ ಎಳೆದರು. ಆದರೂ ಇದ್ದ ಒಬ್ಬ ಮಗ ಎಲ್ಲಿ ಕೈ ತಪ್ಪಿ ಹೋಗುತ್ತಾನೋ ಅಂತಾ "ನಮ್ಮಗಳಲ್ಲಿ ಒಬ್ಬಳಾಗಿ ಹೊಂದಿಕೊಂಡು ಹೋಗುವುದಾರೆ ಸರಿ ಕಣೋ ಅಷ್ಟಾದರೂ adjust ಮಾಡಿಕೊಳ್ಳೋಕೆ ಅವಳ ಹತ್ರ request ಮಾಡಿಕೋ" ಅಂತಾ ಕೇಳಿಕೊಂಡರು. ಒಂದು ಹಂತ ಇಲ್ಲಿಗೆ ಮುಗಿಯಿತು.

ಸಿಂಚನ ಅಲ್ಲಿ ಅವಳ ಮನೆಯಲ್ಲಿ ವಿಷಯ ಹೀಗ್ ಹೀಗೆ ಅಂತಾ ಹೇಳಿದಳು. ಕೇಳುವುದನ್ನೆಲ್ಲಾ ಗಮನ ಇಟ್ಟು ಕೇಳಿದ ನಂತರ, "ಸರಿ ನೋಡುವ" ಅಂತಾ ಅಡ್ಡಗೋಡೆ ಮೇಲೆ ದೀಪ ಇಟ್ಟ ರೀತಿಯಲ್ಲಿ ಅವಳ ಅಪ್ಪ ಮಾತು ಮುಗಿಸಿ ಹೊರನಡೆದರು.

ಇದಾದ ನಂತರ ನಡೆದ ಇಪ್ಪತ್ನಾಲ್ಕು ಗಂಟೆಗಳ ದೃಶ್ಯಾವಳಿಗಳ ಕೊನೆಯ ಭಾಗವೇ ಈಗ ಸುಹಾಸ್ ಸುರಿಯುತ್ತಿರುವ ಮಳೆಯಲ್ಲಿ ಸಕಲೇಶಪುರದ ಘಾಟಿಯಲ್ಲಿ ಮಳೆಗೆ ಮೈಯೊಡ್ಡಿ ದಾರಿ ಮಧ್ಯೆ ದಿಕ್ಕೂ ತೋಚದೆ ಬೆಪ್ಪನ ಹಾಗೆ ಕೂತಿರೋದು.

ಏನಾಗಿತ್ತು ಈ ನಡುವಿನ ಒಂದು ದಿನದಲ್ಲಿ? ಬನ್ನಿ ನೋಡೋಣ...

ಎಂದಿನಂತೆ ಆಫೀಸಿನ ಕೆಲಸದಲ್ಲಿ ಮಗ್ನನಾಗಿದ್ದಾಗ ಮೊಬೈಲ್ ರಿಂಗ್ ಆಯ್ತು. ಆ ಕಡೆಯಿಂದ "ನಾನು ಸಿಂಚನ ತಂದೆ ಚಂದ್ರು, ಚಂದ್ರಶೇಖರ್ ಮಾತಾಡ್ತಿರೋದು. Mr. ಸುಹಾಸ್, ಸಿಂಚನ ಎಲ್ಲಾ ವಿಷಯ ಹೇಳಿದ್ದಾಳೆ. ನಿನ್ನ ಒಂದು ಸಲ ಭೇಟಿಯಾಗಬೇಕು. ಇಲ್ಲಿಗೇ ಬರಕ್ಕಾಗತ್ತಾ? ಆದಷ್ಟು ಬೇಗ ಬಂದಷ್ಟೂ ಒಳ್ಳೇದು" ಸುಹಾಸ್ ದುಗುಡ ತುಂಬಿದ ದನಿಯಿಂದ "ಹೂಂ" ಅಂತಿದ್ದ ಹಾಗೆ ಫೋನ್ ಕಟ್!!! ಧ್ವನಿ ಕೇಳಿದರೆ, sensible ಮನುಷ್ಯನ ಹಾಗೇ ಭಾಸವಾಯಿತು ಸುಹಾಸ್ ಗೆ.

ಸಿಂಚನ ಜೊತೆ ತತ್ ಕ್ಷಣ ಒಮ್ಮೆ ಮಾತಾಡಿ, ಒಬ್ಬನೇ ಹೋದರೇ ಸ್ವಲ್ಪ added advantage ಅಥವಾ ಧೈರ್ಯಸ್ಥ ಅಂದುಕೋತಾರೆ... ಹಾಗೆ...ಹೀಗೆ.. ಅಂತಾ decide ಮಾಡಿ, car start ಮಾಡಿಕೊಂಡು ಮಂಗಳೂರು ಹೈವೇ ನಲ್ಲಿ ಒಳ್ಳೇ ಸ್ಪೀಡ್ ನಲ್ಲಿ ಡ್ರೈವ್ ಮಾಡುತ್ತಾ ಹೊರಟ. ಹಾಗೇ ಏನು ಮಾತಾಡೋದು ಅಂತಾ ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾ ಹೇಗಾದ್ರೂ ಪಟಾಯಿಸಲೇಬೇಕು ಅಂತಾ ಧೃಢ ನಿಶ್ಚಯದಿಂದ ಸಕಲೇಶಪುರ ತಲುಪಿದಾಗ ಸಂಜೆ ಸುಮಾರು ೫ ಗಂಟೆ. ಆಗಲೇ ಕಪ್ಪು ಮೋಡಗಳು ನಾ ಮುಂದು ತಾ ಮುಂದು ಅಂತಾ ಮುಗಿಲಿನಲ್ಲಿ Race ಮಾಡ್ತಾ ಹೋಗ್ತಾ ಇದ್ದವು. ಬೆಳಕು ಮಸುಕು ಮಸುಕಾಗಿ ಸೂರ್ಯ ಮೋಡದ ಮರೆಯಲ್ಲಿ ಮರೆಯಾಗಿದ್ದ.

ಮತ್ತೆ ಫೋನ್ ರಿಂಗ್ "ನಾನು ಚಂದ್ರು. ಮುಂದೆ ಊರಾಚೆ ದೋಣಿಗಾಲ್ ದಾಟಿ ೪ ಕಿಲೋಮೀಟರ್ ಹೋಗಿ ಬಲಕ್ಕೆ ಕಚ್ಚಾ ರೋಡಿನಲ್ಲಿ ಅರ್ಧ ಫರ್ಲಾಂಗ್ ಒಳಗೆ ಬಾ... CS Estate ಅಂತಾ ಗೇಟ್ ಮೇಲೆ ಬರೆದಿರುತ್ತೆ. ಅಲ್ಲಿ ಕಾರ್ ನಿಲ್ಲಿಸಿ ಒಳಗೆ ಬಾ" ಅಂತಾ ಹೇಳಿ ಫೋನ್ ಕಟ್.

ಎಸ್ಟೇಟ್ ಒಳಗೆ ಕಾಲಿಟ್ಟು ನೋಡಿದಾಗ ಸುಹಾಸ್ ನ ಎದೆಬಡಿತ ಸ್ವಲ್ಪ ಜಾಸ್ತಿನೇ ಆಯಿತು. ಕಮ್ಮಿ ಅಂದ್ರೂ ಸುಮಾರು ೩೫ ಎಕರೆ ಕಾಫಿ ತೋಟ. ಯಾವ ಕಡೆ ನೋಡಿದರು ಕಾಫಿ ಗಿಡಗಳು. ಎದುರಿಗೆ ಒಂದು ಭವ್ಯ ಬಂಗಲೆ. ಮುಂದೆ ಹುಲ್ಲು ಹಾಸಿನ ಮೇಲೆ ಒಂದು ಹತ್ತು ಕುರ್ಚಿಗಳು. ಒಂದಿಬ್ಬರು ಕುರ್ಚಿ ಮೇಲೆ ಕೂತಿದ್ದರು. ಮಿಕ್ಕಂತೆ ಒಂದು ಹದಿನೈದು ಮಂದಿ ಸರಿಯಾದ ಕುಸ್ತಿ ಪಟುಗಳಂತಿರುವ ಆಸಾಮಿಗಳು ಸುಮ್ಮನೆ ಕೈ ಕಟ್ಟಿ ನಿಂತಿದ್ದರು.

"ಇಲ್ಲಿ ಬಾ. ಕೂತ್ಕೋ. ನಾನೇ ಚಂದ್ರು. ಇವರು ನನ್ನ ಸ್ನೇಹಿತರು. ನಿನ್ನ Bio data ಎಲ್ಲಾ ಸಿಂಚನ ಆಗಲೇ ಫೋನ್ ನಲ್ಲಿ ಹೇಳಿದ್ದಾಳೆ. So..ಈಗ ಮತ್ತೆ ಅದನ್ನೇ ಹೇಳಿ ಟೈಮ್ ವೇಸ್ಟ್ ಮಾಡೋದು ಬೇಡ. ವಿಷಯಕ್ಕೆ ಬರೋಣ... ಮುದ್ದುಲಿಂಗು ಒಂದು ಕಾಫಿ ತಗೊಂಡ್ ಬಾ"

"..."

"ನೋಡು ಅದೇನೋ ಗೊತ್ತಿಲ್ಲ... ನಮ್ಮನೆ ಹೆಣ್ಣು ಮಕ್ಕಳಿಗೂ ಹಾಗೂ ಈ ಮದುವೆ matter ಗೂ, ಆಗಿ ಬರ್ತಾ ಇಲ್ಲ. ಆದರೂ ನಿನ್ ಹತ್ರ ಹೇಳ್ತೀನಿ. ನಮ್ಮ ಕಡೆ Intercaste marriage ಇವೆಲ್ಲಾ ಸರಿ ಬರೋಲ್ಲ. ಯಾಕಂದ್ರೆ ಸಾಸ್ತ್ರ ಇವೆಲ್ಲಾ ಸರಿ ಆಗೋದಿಲ್ಲ. ಮುಂದೆ ಮದುವೆ ಅಂತಾ ಆದಮೇಲೆ, ಬರೋದು ಹೋಗೋದು ಇವೆಲ್ಲ ಇದ್ದೇ ಇರ್ತಾವೆ. ನಾವು ನಿಮ್ ಕಡೆ ಬಂದ್ರೆ ನೀವ್ ತಿನ್ನೋ ಬರೀ ಪುಳ್ಚಾರು ಅನ್ನ ತಿನ್ನಕ್ ಆಗೋದಿಲ್ಲ. ನಿಮ್ ಮನೆಯವರೂ ಅಷ್ಟೆ, ಇಲ್ಲಿಗ್ ಬಂದ್ರೆ ನಾವ್ ದಿನಾ ತಿನ್ನೊ ಕುರಿ ಕಾಲು ಮಾಂಸ, ನಂಚ್ ಕೊಳಕ್ ಇಟ್ಕೋಳೊ ಸೀಗಡಿ ಕರಿಮೀನು ಇವೆಲ್ಲ ನಿಮಗೆ ಸರಿ ಬರೋದಿಲ್ಲ. ಬರೀ ಇದೊಂದೇ ಅಲ್ಲ ಬೇರೆ ಯಾವ ವಿಷಯನೂ ಸರಿ ಹೋಗೋದಿಲ್ಲ. ಅಷ್ಟಿಲ್ಲದೇ ನಮ್ ಹಿರೀಕರು ಮಾಡಿರೋದಾ...ಜಾತಿ ಮತ...ಸಂಪ್ರದಾಯ ಅಂತೆಲ್ಲವಾ...? ಅದಕ್ಕೆ ಹೇಳ್ತಾ ಇದೀನಿ. ಸುಮ್ಮನೆ ಇವೆಲ್ಲಾ ಬಿಟ್ಟುಬಿಡು. ನಂಗೊತ್ತು ನಮ್ಮ ಹುಡುಗಿನ ಚಿನ್ನದ ತರಾ ಬೆಳೆಸಿದ್ದೀನಿ. ಯಾರೇ ನೋಡಿದ್ರು ದೃಷ್ಟಿ ಆಗೋ ಹಂಗೆ ಬೆಳೆದು ನಿಂತಿದಾಳೆ ಅಂತಾ. ನಿಂಗೂ ವಯಸ್ಸು. ಆಗುತ್ತೆ ಈ ಥರ ಎಲ್ಲಾ. ಮಗಳನ್ನ ಇಷ್ಟೆಲ್ಲಾ ಮನೆ ಇಂದಾ ದೂರ ಇಟ್ಟು ಓದಿಸಿ, ಒಳ್ಳೇ ದೊಡ್ಡ ಕಂಪನಿಲಿ ಕೆಲಸಕ್ಕೆ ಕಳಿಸಿ, ನೋಡಿಕೋತಿರೊ ಅಪ್ಪ ಆದ ನಂಗೆ, ಮುಂದೆ ಈ ಥರಾ ಎಲ್ಲಾ ಆಗಬಹುದು ಅಂತಾ ಯೋಚನೆ ಇರೋದಿಲ್ಲವಾ? ಎಲ್ಲಾ ಯೋಚನೇನೂ ಮಾಡಿದ್ದೀನಿ. ಮುಂದೆ ಅವಳ ಜೀವನದ ಯೋಚನೇನು ನನ್ನ ಜವಾಬ್ದಾರಿ.... ಕುಡಿ...ಕಾಫಿನ... ನಮ್ ತೋಟದ್ ಬೀಜದ್ದೇ... ನಿಂಗೇ ತರಿಸಿದ್ದು. ಅದು ಸರಿ ಇದೆಲ್ಲಾ ನಿನ್ ಹತ್ರ ಯಾಕ್ ಹೇಳ್ತಾ ಇದೀನಿ ಅಂದ್ರೆ ನಮ್ ಹುಡುಗಿ ಹೇಳಿದ್ಲು... ಹುಡುಗ ಒಳ್ಳೆಯವನು. ಸಭ್ಯಸ್ಥ ಅಂತೆಲ್ಲಾ. ನೋಡಕ್ಕೂ ಒಳ್ಳೆಯವನ ಥರ ಕಾಣುಸ್ತಾ ಇದೀಯ. ಅದಕ್ಕೆ ಸರಿಯಾಗಿ ನಡೆಕೊತಾ ಇದೀನಿ"

ಇವರು ಮಾತಾಡುತಾ ಇದ್ದರೆ ಪಕ್ಕದಲ್ಲೆ ನಿಂತ ಯಮಕಿಂಕರನಂಗೆ ಇದ್ದ ಆಸಾಮಿಗಳು ಪಕ್ಕಾ ಸೀಳುನಾಯಿಗಳ ಥರಾ ನೋಡ್ತಾ ಇದ್ದರು.

ಸುಹಾಸ್ ಇದ್ದ ಧೈರ್ಯ ನೆಲ್ಲಾ ಒಟ್ಟುಗೂಡಿಸಿ "ಆದರೂ..ನಾನೂ ನಮ್ಮ ತಂದೆ ತಾಯಿಗೆ ಒಬ್ಬನೇ ಮಗ... ಬೆಂಗಳೂರಲ್ಲಿ ಸ್ವಂತಾ ಮನೆ... ಕೈ ತುಂಬಾ ಕೆಲಸ... ಫಾರಿನ್ ಗೆ ಕೂಡ ಹೋಗಿ ಬಂದಿದ್ದೀನಿ...."

"ಸಾಕು ಸುಮ್ಮನಿರಯ್ಯಾ ಕಂಡಿದೀನಿ ಫಾರಿನ್ ನ. ಏನ್ ಇವನೊಬ್ಬನೇ ಊರಿಗೆ ಪದ್ಮಾವತಿ ಫಾರಿನ್ ನೋಡಿರವನು!! ದೊಡ್ಡವನು ನಾನು ಬೇಡ ಅಂತಾ ಮರ್ಯಾದೆಯಿಂದ ಹೇಳಿದಮೇಲೆ ಸುಮ್ಮನೆ ಮುಚ್ಚಕೊಂಡು. ಅಣ್ಣಾ ಅಕ್ಕಾ ಅಂತಾ ಮನೇ ಕಡೇ ಹೋಗೋ ರಸ್ತೆ ನೋಡ್ತೀಯ ಅಂತಾ ತಿಳ್ಕೊಂಡಿದ್ದೆ. ನೀನ್ ನೋಡಿದ್ರೆ ಪುರಾಣ, ಜಾತಕ ತೆಗೀತಾ ಇದೀಯಲ್ಲ. ಅಷ್ಟೇ ಕೊನೆ. ಬೆಂಗಳೂರಲ್ಲಿ ಸ್ವಂತ ಮನೆ ಏನು ಬದನೆಕಾಯಿ? ನಂಗೆ ವಿಧಾನ ಸೌಧ ವರೆಗೂ ಬಾಡಿಗೆ ತಗೋಳಕ್ಕೆ ತಾಕತ್ ಇದೆ...ಏನ್ ತಿಳ್ಕೊಂಡಿದೀಯಾ??!!! ತಲೆಗಳು ಬಿದ್ದೋಗವೆ ನಮ್ಮ ಮನೇಲಿ ಹೆಣ್ ಮಕ್ಕಳ ಮದುವೆ ವಿಷಯ ಬಂದಾಗ ಗೊತ್ತೋ!!! ಅವೆಲ್ಲಾ ಬೇಡ ಈಗ... ಏನೋ ಬೆಂಗಳೂರ್ ಹುಡುಗ ಓದ್ಕಂಡಿದೀಯ ಅಂತಾ ಮೆತ್ತಗೆ ಹೇಳ್ತಾ ಇದೀನಿ. ಸರಿಯಾದ ದಾರಿ ನೋಡ್ಕೊ. ಲೇ ಯಾರೋ ಅದು.... ಬಿಟ್ ಬಾರೋ ಈ ಮಗನ್ನ ಗೇಟ್ ತಂಕ...."

ಸುಹಾಸ್ ಗೆ ಆ ಮೋಡದ ಚಳಿಯಲ್ಲೂ ಬೆನ್ನ ಹುರಿಯಲ್ಲಿ ಬೆವರು ಕಿತ್ಕೊಂಡು ಹೃದಯ ಬಾಯಿಗೆ ಬಂದಂಗಾಗಿತ್ತು. ಇನ್ನೊಂದ್ಸಲ ಆಸೆಗಣ್ಣಿನಿಂದಾ ಅವರ ಕಡೆ ನೋಡಿದಾಗ "ಏನ್ ನೋಡ್ತೀಯಾ...ಹೇಳಿಲ್ಲ್ವಾ? ಆ ಕಡೆ ಇದೆ ಗೇಟು..."

ಗೇಟ್ ಹತ್ತಿರ ಹೋದಾಗ "ಆ..ಅದೇನಂದೆ ನಿನ್ ಹೆಸರು? ಓ ಸುಹಾಸ್.......ನಾಳೆ ಇಂದಾ ಬೇರೆ ಕಡೆ ಕೆಲಸ ನೋಡ್ಕೊ. ಅದು ಒಳ್ಳೇದು ಅನ್ಸತ್ತೆ. ಬೇಕಾದಷ್ಟು ಕೆಲಸ ಸಿಗುತ್ತಾವಲ್ಲ....ಇಲ್ಲಾಂದ್ರೆ ಹೇಳು...ನಾನೇ minister ಕಡೆ ಮಾತಾಡಿ ಒಂದು ವ್ಯವಸ್ಥೆ ಮಾಡ್ತೀನಿ"

ಇದೊಳ್ಳೇ ಪೀಕಲಾಟಕ್ಕೆ ಬಂತಲ್ಲಪ್ಪಾ ಅಂತಾ ಕಣ್ಣು ಕಪ್ಪುಗಟ್ಟಿದ ಹಾಗಾಯಿತು ಸುಹಾಸನಿಗೆ.

ಅಷ್ಟು ಹೂತ್ತಿಗೆ ಆಗಲೇ ಸುಹಾಸನ ತಲೆ ಎಲ್ಲೂ ಮುಂದೆ ಓಡದೆ..ಸಿಂಚನಳ ಅಮಾಯಕ ಮುಖ ಕಣ್ಣ ಮುಂದೆ ತೇಲಿ ಹೋಗಿ... ಹೈವೇ ಬಂದಾಗ ಕಾರ್ ನ ಎಡಕ್ಕೆ ತಿರುಗಿಸುವ ಬದಲು ಬಲಕ್ಕೆ ತಿರುಗಿಸಿ... ಇಲ್ಲಿ ಬಂದು ಕೂತ್ಕೊಂಡು..ಹಳೆಯ ಪುಟಗಳನ್ನು ಇಲ್ಲಿವರೆಗೂ ಓದಿದ್ದು!

ಮುಂದೆ?

ಇದಾದ ಕೇವಲ ನಾಲ್ಕು ದಿನಗಳ ನಂತರ:

ಸರಾಸರಿ ಇಪ್ಪತ್ತು ಸ್ಕಾರ್ಪಿಯೋ ಐದು ಹೋಂಡಾ CRV, ಐದು ಇನ್ನೋವಾ ಕಾರುಗಳು. ಅದೇ ಸಕಲೇಶಪುರದ CS ಎಸ್ಟೇಟ್ ಮುಂದೆ ನಿಂತಿವೆ. ಅದೇ ಹುಲ್ಲುಹಾಸಿನ ಮೇಲೆ ಕುರ್ಚಿಗಳು. ಸನ್ನಿವೇಶ ಸ್ವಲ್ಪ ಬೇರೆ. ಚಂದ್ರು ಹಾಗೂ ಧಡೂತಿ ಆಸಾಮಿಗಳು ಕೈ ಕಟ್ಟಿಕೊಂಡು ದೇಹ ಮುಂದೆ ಬಗ್ಗಿಸಿ ನಿಂತಿದ್ದಾರೆ. ಒಬ್ಬ ಕಪ್ಪು ಕನ್ನಡಕಧಾರಿ ಮನುಷ್ಯ ಹಾಗೂ ಸುಹಾಸ್ ಕೂತಿದ್ದಾರೆ!!!
ಉಳಿದಂತೆ ಸಫಾರಿ ಹಾಕ್ಕೊಂಡಿರೋ ಕಡಿದರೆ ಸರಿಯಾಗಿ ನಾಲಕ್ಕು ಶರತ್ ಆಗೋಂತಹಾ ಮೂವತ್ತು ಜನ ಸಶಸ್ತ್ರಧಾರಿಗಳಾಗಿ ನಿಂತಿದ್ದಾರೆ.

ಹೇಗೋ ಮಾಡಿ ಅವತ್ತು ಸಕಲೇಶಪುರದ ಘಾಟಿನಿಂದ ಸುಹಾಸ್ ಬೆಂಗಳೂರು ಮುಟ್ಟಿದಮೇಲೆ ಮನೆ ಮುಂದೆ ಇದೇ ಕಾರುಗಳು ಹಾಗೂ ಇದೇ ಜನರ ಸೈನ್ಯ. ಒಳಗಡೆ ಹೋಗುತ್ತಿದ್ದ ಹಾಗೆ ಒಬ್ಬ ಮನುಷ್ಯನ ಮುಖ ಎಲ್ಲೋ ಪರಿಚಯದ ಹಾಗೆ ಕಂಡಿತು ಸುಹಾಸ್ ಗೆ. ಓಹ್!!!!! ಅದೇ ಸುರೇಶ್ ಅಂಕಲ್!!! ಅಹಮದಾಬಾದ್!!! ಅಪ್ಪನ factory!! ಮೋಸ!! ಅವನು ಹೇಗೆ ಇಲ್ಲಿ!!!??

ಅಪ್ಪ ಬಂದು ಸುಹಾಸ್ ನ ಬೆನ್ನು ತಟ್ಟಿ "ಸುರೇಶ್ ಗೆ ಎಲ್ಲಾ realize ಆಗಿ ಕ್ಷಮೆ ಕೇಳಲಿಕ್ಕೆ ಬಂದಿದ್ದಾರೆ ಸುಹಾಸ " ಸುರೇಶ್ ಬಂದು " I am really sorry Suhaas. There are hardly any places where I haven't searched for your family after all those...bla bla bla...." ಅವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದನ್ನೂ ಗಮನಿಸಿದ ಸುಹಾಸ್.

ಸುರೇಶ್ ಅಂಕಲ್ ನ ಕಾಂಟ್ಯಾಕ್ಟ್ಸ್ ಮೊದಲಿಂದಲೂ ದೊಡ್ಡವರ ಜೊತೇನೇ...ಹಾಗೇನೆ....ದುಡ್ಡು ಸಂಪಾದನೆ ಬಳಿಕ ಮಂಗಳೂರಿನ ಅಂಡರ್ ವರ್ಲ್ಡ್ ಕಿಂಗ್ - ರೈ ಜೊತೆ ಕೊಡ ಮುಂಬೈ ಲಿಂಕ್ ಇಂದಾ ಕೆಲಸ ಮಾಡಿ ಕೋಟ್ಯಾಂತರ ವ್ಯವಹಾರನೇ ಇಟ್ಟುಕೊಂಡಿದ್ದಾನಂತೆ. ಹೀಗಿರುವಾಗ ರೈ ಗೆ ಒಮ್ಮೆ ಈ ಆಸಾಮಿಯ ಮೇಲೆ ಏನೋ ಅನುಮಾನವಾಗಿ ವಿಚಾರಿಸಿದಾಗ ಅಪ್ಪನಿಗೆ ಮೋಸ ಮಾಡಿ ಗಳಿಸಿದ್ದ ಕಥೆ ಎಲ್ಲ ಗೊತ್ತಾಗಿ... ಅಮಾಯಕರಿಗೆ ಮೋಸವನ್ನು ಎಂದೂ ಸಹಿಸದ ರೈ ಸುರೇಶ್ ಮೇಲೆ ಒಂದು ಕಣ್ಣಿಟ್ಟು ನೀನು ಗಳಿಸಿದ್ದ ಆಸ್ತಿಯಲ್ಲಿ ಅಪ್ಪನಿಗೆ ಸಮಪಾಲು ಕೊಟ್ಟು ಜೀವನ ಪೂರ್ತಿ ಅವರಿಗೆ ಮರ್ಯಾದೆಯಿಂದ ನಡೆದುಕೊಂಡರೇ ನಿನ್ನ ಜೀವನ...ಇಲ್ಲಾಂದರೆ... ರೈ ನಿಜವಾದ ರೂಪ ನೀನು ನೋಡಬೆಕಾಗುತ್ತೆ ಎಂದು ಸುರೇಶನಿಗೆ ಹೆದರಿಸಿದ ಮೇಲೆ... ರಾತ್ರಿ ಹಗಲೂ ಎನ್ನದೆ ತನ್ನ ಬಂಟರನ್ನೆಲ್ಲಾ ಬಿಟ್ಟು ಹುಡುಕಿದಾಗ.... ಸುಹಾಸ್ ನ ಆಫೀಸಿನ ಕಡೆಯಿಂದ ವಿಳಾಸ ಪತ್ತೆ ಆಗಿ ಅಪ್ಪನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದ ಸುರೇಶ್ ಅಂಕಲ್.

ಆದರೆ ಸುಹಾಸ್ ಗೆ ಹಿತವಾಗುವ ಸುದ್ದಿ ಇನ್ನೊಂದು ಏನಿತ್ತೆಂದರೆ... ಸುರೇಶ್ ಸುಹಾಸ್ ಬಳಿಗೆ ಬಂದು " ನಿನ್ನ ಆಫೀಸ್ ನಲ್ಲಿ ನಿನ್ನ ಬಗ್ಗೆ ವಿಚಾರಿಸಿದಾಗ ಸಿಂಚನ ಪರಿಚಯನೂ ಆಗಿದೆ. ನಡೆದದ್ದೆಲ್ಲಾ ಗೊತ್ತಾಯಿತು. ನೀನೇನೂ worry ಮಾಡ್ಕೋಬೇಡ ಎಲ್ಲಾ ನಾನು ಸರಿ ಮಾಡ್ತೀನಿ" ಅಂದಾಗ!

Back to CS Estate:
ರೈ (ಕನ್ನಡಕಧಾರಿ ಮನುಷ್ಯ): ನೋಡು ಚಂದ್ರಣ್ಣ ಒಂದು ಸಣ್ಣ matter. ನಮ್ಮ ಕಡೆಯಿಂದಾ ಈ ಹುಡುಗನ familyಗೆ ಅನ್ಯಾಯ ಆಗಿದೆ. ಅದನ್ನ ಸರೀ ಮಾಡ್ಕೊಳಕ್ಕೆ ಇದು ಒಂದು ಅವಕಾಶ ಅಂತಾ ನಾನು ತಿಳ್ಕೊಂಡಿದೀನಿ. ನಿನ್ನ ಸಹಾಯ ಬೇಕು. ಎಲ್ಲಾ ವಿಚಾರಿಸಿದ್ದೀನಿ. ಒಳ್ಳೇ ಹುಡುಗ...ನೆಂಟಸ್ತನ ಬೆಳೆಸೋಕು ಜನ ಒಳ್ಳೇಯವರು. ಪಾಪ ಈ ಹುಡುಗಂಗೆ ಕರೆಸಿ ಏನ್ ಏನೋ ಹೇಳಿದ್ಯಂತೆ..ಅವೆಲ್ಲಾ ಇನ್ನು ಮುಂದೆ ಬೇಡ.... ನಿಂಗೆ ಅರ್ಥ ಆಗ್ತಿದೆ ಅಲ್ಲವಾ? ಎಲ್ಲಾ ಸರಿ ಹೋಗತ್ತೆ ಅಂತಾ ಅಂದುಕೊಂಡಿದೀನಿ.

ಚಂದ್ರು: ಅಂದ್ರೂ ಅಣ್ಣಾ...ಅದು ...ಜಾತಿ....

ರೈ: (ಬಲಗೈ ತೋರು ಬೆರಳನ್ನ ಜೋರಾಗಿ ಒಂದು ಸಲ ಮೇಲೆತ್ತಿ) ನೋಡು...ಹೇಳೋದ್ ಹೇಳಿದೀನಿ... ದೊಡ್ಡವರು ಹೇಳಿದರೆ ಅದೇನೋ ಮಾಡ್ಕೊಂಡು.. ಅಣ್ಣಾ..ಅಕ್ಕಾ ಅಂದ್ಕೊಂಡ್ ಇರಬೇಕು ಅಂತಾ ನೀನೇ ಅಂದಿಯಂತೆ.... ಈಗ ಹೆಚ್ಚಿಗೆ ಮಾತು ಬೇಡ. ನಂಗೆ ಈ ಥರಾ ರಾಗ ಎಳೆಯೋವರನ್ನ ಕಂಡರೆ ಸರಿ ಬರಲ್ಲ.... ರೀ ಶೆಟ್ಟರೇ... ಸಕಲೇಶಪುರದಲ್ಲಿ ಒಂದು ಒಳ್ಳೇ choultry ನೋಡ್ರಿ...book ಮಾಡ್ರಿ. ಸುರೇಶ...ಮುಂದಿನ ಕೆಲಸ ನೀನ್ ನೋಡ್ಕೊಳಪ್ಪಾ... ಮದುವೆ ದಿನ ನಂಗೆ ನೆನಪು ಮಾಡು... ಪ್ರೇಮಿಗಳಿಗೆ ಅಕ್ಷತೆ ಹಾಕಕ್ಕೆ ಬರ್ತೀನಿ (ನಗು) ಸುಹಾಸ್ ಕಡೆ ನೋಡ್ಕೊಂಡು: ಏನಪ್ಪಾ ಹೀರೋ...ಸಂತೋಷನಾ? ಹೋಗಿ ನಿಮ್ಮ ಹುಡುಗಿ ಜೊತೇ ಶಾಪಿಂಗ್ ಮಾಡಿ ಮಜಾ ಮಾಡು. ಈ ದಿನಗಳು, ಟೈಮು ಮುಂದೆ ಸಿಗಲ್ಲ ಮತ್ತೆ. ಚೆನ್ನಾಗಿ ಎಂಜಾಯ್ ಮಾಡು. (ಎದ್ದು ನಿಂತು) ಚಂದ್ರಣ್ಣಾ ನಾನು ಹೊರಟೆ... ಈ ಸಲ ಕಾರವಾರದ fishing boats tender ಬೇಕು ಅಂತಿದ್ಯಂತೆ... ಮದುವೆ ಗಲಾಟೆ ಎಲ್ಲಾ ಮುಗುಸ್ಕೋ...ಆಮೇಲೆ ಮಾತಾಡೋಣ.... "

ರೈ ಕಾರ್ ಒಳಗೆ ಕೂತು ಸುಹಾಸನ ಮುಖದಲ್ಲಿ ಮಂದಹಾಸ ಗಮನಿಸಿ ಕೈ ಬೀಸುತ್ತಿದ್ದಹಾಗೇ... ಕಾರುಗಳು ಒಂದರ ಹಿಂದೆ ಒಂದು ವೇಗವಾಗಿ ಧೂಳೆಬ್ಬಿಸಿಕೊಂಡು ಮರೆಯಾದವು.

ಚಂದ್ರಣ್ಣ: "ಅಳಿಯಂದರೆ....ಬೆಂಗಳೂರಿನವ್ರು ನೀವು...ಮುಂಚೆನೇ ಹೇಳೋದಲ್ಲವಾ... ಇಂಗೆಲ್ಲಾ contacts ಇವೆ ನಿಮಗೆ ಅಂತಾ...ಸುಮ್ ಸುಮ್ಮನೆ ಪೇಚಿಗೆ ಸಿಗುಸ್ತೀರಾಪ್ಪಾ ನೀವು...ಹಿ ಹಿ ಹಿ.... Reception ಗೆ ಸೂಟ್ ಹೊಲಿಸ್ಕೋತಿರೋ ಅಥವಾ ಅದೇನೋ ಬಂದಿದೆಯಲ್ಲ ಉತ್ತರದ ಕಡೆಯವರು ಹಾಕ್ಕೊತಾರಲ್ಲಾ...ಹೇಗೆ? :) "

---- ಏನು ನಿನ್ನ ಹನಿಗಳ ಲೀಲೆ..... ಸುರಿವ ಒಲುಮೆಯಾ ಜಡಿಮಳೆಗೆ........

ಕಾಮೆಂಟ್ಸ್ ಗಾಗಿ ಕಾಯುತ್ತಿದ್ದೇನೆ
-- ಶರತ್

14 comments:

Unknown said...

Super maga....Ellinda tandyo ee story na...BTW, yaradu Suhas...My wishes for him & his family :-)

Unknown said...

Sakath agi ide maga story, is it a real story or your own fiction. Gaurentee agi idanna ondu film story madu hit aguthe. Continue maga with this skill obba olle story writer kooda agbahudu.

Bye
Arvind

Unknown said...

Sharaththu, chennagi bardideeya kano. Adsari idenu mungaru male part 2 na atva real storyna. Any way keep writing
Saraswathi

asha said...

Masthagide sharath story. Olle story writer agbahudu neevu...idu real story adre, i wish all the good days for sushas & family ahead.

ಶರತ್ said...

Thanks for the comments...This is half real and other half fiction :)

Unknown said...

Maga adu suhas alla antha gothu maga adu sharath alva

Viji said...

leave your comment antha ide...
ee kathe'na odida mele "No Comments" anno haagide...
But, story'ge happy ending kottidyalla Sharatha... ade Khushi...
:-)
---Vijay Sharma

Naveen said...

Mast agide maga...ivattu time sigtu..full oddye...sooper ...keep writing....

Madhuri said...

paapa suhas ful tension madkondirthane nin climax odbittu!!
nice story.. keep writing :)

Susheel Sandeep said...

ಸಿಸ್ಯಾ...ಕಥೆ ಸೂಪರ್ ಆಗಿದೆ...ಆದ್ರೆ ಸ್ಟೋರಿ ಸ್ವಲ್ಪ ಇಂಪ್ರೂವ್ ಮಾಡ್ಬೋದಿತ್ತು ಅನ್ನಿಸ್ತು! :D

ಚಿತ್ರಾನ್ನ ಮಗ...ಎಷ್ಟು ಕ್ಯಾರೆಕ್ಟರುಗಳು ರಿಯಲ್ ಇದ್ರಲ್ಲಿ???
ಕಡಿದರೆ ನಾಕು ಶರತ್ ಆಗೋಂಥಾ ಘಟಾನುಘಟಿಗಳನ್ ಸುತ್ತ ನಿಲ್ಲಿಸಿಕೊಂಡಿದ್ದು ಸುಹಾಸನಾ ಶರತ್ತಾ?!

On a serious note - ಭಾಷೆಗೆ ಒಂದೇ ಥರದ ಫ್ಲೋ ಕೊಡಕ್ಕಾಗತ್ತ ನೋಡು.ಕತೆ ಬರೀವಾಗ ಅದು ಸಂಪೂರ್ಣವಾಗಿ ಕತೆ ರೂಪದಲ್ಲೇ ಬರಿ.ನಾಟಕ-ಚಿತ್ರಕಥೆಯ ಎಳೆಗಳು ಬರಬಾರದು.(Eg: ರೈ ಮಾತಾಡುವಾಗಿನ actions)

ಈಗ ಎಂಗವ್ರೆ ಸುಹಾಸ-ಸಿಂಚನ?! (ರುಚಿತಾ ಗೆ ಗಂಡು ಮಗು ಆಯ್ತಂತೆ! :))

ಶರತ್ said...

ಹೂ ... ನಂಗು ಕತೆನ ಸರಿ ಮಾಡಬಹುದಾಗಿತ್ತು ಅಂತಾ ಅನ್ನಿಸುತ್ತಾನೆ ಇದೆ. ಆಮೇಲೆ...ಆಕ್ಸಿಡೆಂಟ್ ನೋಡ್ಕೊಂಡ್ ಬಂದಿದ್ದ ಮೂಡ್ ನಲ್ಲಿ ಬರೆದಿದ್ದು. Movie screenplay ನೇ ತಲೇಲಿ ಇತ್ತು. ಅದಕ್ಕೆ ಸುಮ್ಮನೆ ತೋಚಿದ್ದನ್ನ ಬರೆದೆ.

ಬಂದಿರೋ ಎಲ್ಲಾ ಕ್ಯಾರೆಕ್ಟರುಗಳು almost ರಿಯಲ್. ಸುಹಾಸ ಸಿಂಚನ ಆರಾಮ್ ಇದಾರೆ. ಆದರೆ ಪಾಪ...ರುಚಿತಾಗೆ ಇನ್ನು ತಾಯಿ ಭಾಗ್ಯ ಬಂದಿಲ್ಲ... ಅವಾಗಾವಾಗ ಸುಹಾಸಂಗೆ ಫೋನ್ ಮಾಡಿ ತಲೆ ತಿಂತಾ ಇರ್ತಾಳೆ ಸುಹಾಸಂಗೆ

Satisha said...

SJ, kathe baredu bahala dina aythu anstha ilwa ??? next episode yaavaga man ??

-Satisha

Satisha said...

SJ, kathe baredu bahala dina aythu anstha ilwaa ? yaavaga next episode ?? ninna katha-handhara na inna vistharisu...

-Satishaa

ಗೌತಮ್ ಹೆಗಡೆ said...

mast re mast:) :)