ಆ ದಿನಗಳು...

ಸರ್ವರ್ ಕಥೆ ಓದಿ...ಸತೀಶ ಮತ್ತು ಇತರರ ಜೊತೆ ವಿ.ವಿ.ಆಫೀಸಿನ ಟೆರ್ರೇಸಿನ ಮೇಲೆ... ಚಳಿಯಲ್ಲಿ ನಮ್ಮ ಕೆ.ಟಿ. ಮಾಡಿದ ಕಾಫಿ ಹೀರುತ್ತಾ ಇದ್ದೆ....ಇತ್ತೀಚೆಗೆ ಬಂದ "ಆ ದಿನಗಳು.." ಚಿತ್ರದ ವಿಮರ್ಶೆ... ಅದರ ನೀಳ ನಾಸಿಕದ ನಾಯಕಿಯ ಸುಂದರ ಅಮಾಯಕ ಮುಖ ನಮ್ಮ ಆಫೀಸಿನ ಒಬ್ಬಳ ಚಹರೆಯನ್ನೇ ಹೋಲುತ್ತಿದೆ ಅನ್ನುವ ಚರ್ಚೆ. ಇದರ ಜೊತೆಗೆ ಹಳೆಯ ನೆನಪುಗಳನ್ನು ಕೆದಕುವ ಚಟ. ಆಗ ನಮ್ಮ ನಡುವೆ ಬಂದಿದ್ದು ನಮ್ಮ ನಾಟಕದ ಗ್ಯಾಂಗ್ ನ ಅಭಿಮನ್ಯು ಸತೀಶನ ಹಳೆಯ ಪುಸ್ತಕದ ಬಿಳಿಯ ಹಾಳೆಗಳ ಕಪ್ಪನೆಯ ಬರಹ...ಅವನು ಹೇಳುತ್ತಾ ಹೋದ...ನಾನು ಅದಕ್ಕೆ ಒಂದು ಬರವಣಿಗೆಯ ರೂಪ ಕೊಡುವ ಪ್ರಯತ್ನದಲ್ಲಿ ನೆನಪಿನ ದೋಣಿಯ ಹುಟ್ಟು ಹಾಕಿದೆ.

ಸತೀಶ:

PUC ಮುಗ್ಸಿ, CET ಫಲಿತಾಂಶ ಬಂದ ದಿನಗಳು....Counselling ಆಗಿ ಇಂಜಿನಿಯರಿಂಗ್ ಸೀಟು ಅಂತಾ ಸಿಕ್ತು ...ಭಾರೀ ಜೋಶ್ ನಲ್ಲಿ 'Enter the Dragon!' ಅಂತಾ ಒಳಗಡೆ Admission ಮಾಡಿಸಕ್ಕೆ Enter ಆದೆ.


ಸರಿ ಅಂತ ಯಾರ್ ಯಾರ್ ಹತ್ರನೋ ಡೀಲ್ ಮಾಡಿಸಿ... ಚಕಾ ಚಕ್ ಅಂತ Admission ಮುಗಿಸಿ ಆಚೆ ಬರ್ತಾ ಇದ್ದೆ ಆಗ "Excuse Me" ಅಂತಾ ಒಂದು ಸಿಹಿ ದನಿ.. ಹಿಂದೆ ನೋಡಿದೆ .. ಒಂದು ಸೋಡಾ ಬುಡ್ಡಿ ಹಾಕ್ಕೊಂಡಿರೋ ಹುಡುಗಿ ನನ್ನೇ ಕರೀತಾ ಇದ್ದಳು... "ಝಕಾಸ್" ಅಂತಾ ಮನಸ್ಸಿನಲ್ಲೇ ಅಂದುಕೊಂಡು ಹೋದೆ... "Admission ಗೆ Procedure ಏನು???" ಅಂತಾ ಕೇಳಿದಳು.


ಸರಿ ಸರಿ.. ಇವತ್ತು ಎಲ್ಲೋ ನರಿ ಮುಖ ನೋಡಿಕೊಂಡೇ ಎದ್ದಿದೀನಿ ಅಂತಾ, Fullu Explain ಮಾಡಿದೆ... ಸ್ವಲ್ಪ Reference ಕೂಡ ಕೊಟ್ಟೆ.. ಮಾತಿನಲ್ಲಿ ಹಾಗೇ ಗೊತ್ತಾಯ್ತು ಈ ಫಿಗರ್ ನನ್ನ ಕ್ಲಾಸ್ ಮೇಟ್ ಆಗುತ್ತಾಳೆ ಅಂತಾ....ಆದ್ರೆ ಮನಸಲ್ಲಿ ಮಾತ್ರ.. ಎಲ್ಲಾ ಒಕೆ .. ಸೋಡಾ ಬುಡ್ಡಿ ಹುಡುಗಿ ಯಾಕೆ ಅಂತಾ ಇದ್ದೇ ಇತ್ತು.. ಆದರೂ ಹೇಗೋ ಅಡ್ಮಿಶನ್ ಮುಗಿಸಿ Escape ಆದೆ..

ಕಾಲೇಜ್ ಶುರು ಆಯಿತು.. ಮೊದಲ ದಿನ.. ಅದೇ Intro.. ಅದೇ Raggings (ಆದರೆ ನಾನು ಲೋಕಲ್.. ಹಾಗಾಗಿ ನೊ Raggings)... ನನ್ನ ಕಣ್ಣುಗಳು ಎಲ್ಲಿ ಅವಳು ಸೋಡಾ ಬುಡ್ಡಿ ಹುಡುಗಿ ಅಂತಾ ಹುಡುಕುತ್ತಾ ಇದ್ದವು... "ಹಾಯ್ ಸತೀಶ್".. ಆಹ್!.. ಅದೇ ಹುಡುಗಿ.. ಆದರೆ ಸೋಡಾ ಬುಡ್ಡಿ ಅಲ್ಲ..!! ನಿಜವಾಗ್ಲೂ ಫಿಗರ್ ಆಗಿ ಹೊಗಿದ್ಲು..! (ಎಲ್ಲ 'ಲೆನ್ಸ್' ಮಹಿಮೆ).. ಅವತ್ತಿಂದಾ ಅವಳ fans ಲಿಸ್ಟ್ ನಲ್ಲಿ ನಂದೇ ಮೊದಲ ಹೆಸರು... ಹೀಗೇ ದಿನಾ ಕಳೀತಾ ಕಳೀತಾ.. ಒಳ್ಳೆ ಗೆಳತಿ ಆದಳು.... (As Expected)

ಹೀಗೇ.. Group Studies ಅಂತಾ.. ಕ್ಯಾಂಟೀನ್ ನಲ್ಲಿ ಕಾಫಿ ಕುಡೀತಾ ನನ್ನ ಹುಡುಗಿ ಹತ್ತಿರ ಎಲ್ಲಾ Information ತಗೊಂಡೆ (Information is Wealth u see).. ಆದರೆ ಈ ಚಿಂದಿ ಚೋರ್ ಫ್ರೆಂಡ್ಸ್ ಇದ್ದೇ ಇರುತ್ತಾರೆ.. ನಮ್ಮಿಬ್ಬರನ್ನ "Dove" ಗಳು ಅಂದುಕೊಂಡುಬಿಟ್ಟಿದ್ರು...ಅದು ನಂಗೂ ಒಂಥರಾ ಮಜಾ ಕೊಡುತ್ತಾ ಇತ್ತು.. ಸೊ.. ನಾನು ಕೂಡ ಹಾಗೇ ಹಾರೋಗ್ತಾ ಇದ್ದೆ....

ಹೀಗೇ ೧ ವರ್ಷ ಆಗೇ ಹೋಯ್ಥು.... ಇನ್ನೂ ೨ ವರ್ಷ ಬರೇ ಕನಸು ಕಂಡು.. ಬೈಕ್ ನಲ್ಲಿ ಒಡಾಡಿದ್ದೇ ಆಯಿತು... ಅಷ್ಟರಲ್ಲಿ ನಮ್ಮಪ್ಪ ಅಂದರು.. "ಏನೋ ಮಾಡ್ತೀಯ ಇಂಜಿನಿಯರಿಂಗ್ ಆದ ಮೇಲೆ ???? ಅಂತಾ".. ಶಾಕ್ ಆಗಿ ಸುಮ್ಮನೆ ಒಂದು ಸ್ಮೈಲ್ ಕೊಟ್ಟು Escape ಆದೆ.

ಸರಿ.. ಹೀಗೇ ನಮ್ಮ ಹುಡುಗಿ ಹಿಂದೆ ಬೈಕ್ ನಲ್ಲಿ ಸುತ್ತೋದು ಅವರ ಮನೆ ಮುಂದೆ ಬೀಟ್ ಹೊಡಿಯೋದು ಮಾಡಿ ಮಾಡಿ..ನನ್ನ ಬೈಕ್ ನ ಟೈರ್ ಸವೀತು ಆದ್ರೆ ನನಗೆ ಅಂತಾ ಜಾಸ್ತಿ ಏನೂ ಪ್ರಯೋಜನ ಆಗ್ಲಿಲ್ಲ.


ಹೀಗೇ ಯೋಚನೆ ಮಾಡ್ತಾ ಮಾಡ್ತಾ ಅನಿಸುತ್ತಾನೆ ಇತ್ತು..ಎಷ್ಟು ಸಲ ಅವಳಿಗೆ ನನ್ನ ನೋಟ್ಸ್ ಕೊಟ್ಟಿಲ್ಲ (ನಾನೇ ಜೆರಾಕ್ಸ್ ಮಾಡಿಸಿ)... ಎಷ್ಟು ಲ್ಯಾಬ್ Exams ನಲ್ಲಿ ಅವಳನ್ನ ಪಾಸ್ ಮಾಡಿಸಿಲ್ಲ.... ಎಷ್ಟು ಸಲ ಅವಳ ರಿಸಲ್ಟ್ ನಾನೇ ನೋಡಿ ಫೋನ್ ಮಾಡಿ "Congrats" ಅಂತಾ ಹೇಳಿಲ್ಲ (I was her lucky charm ಅಂತಾ ಕೂಡ ಹೇಳ್ತಾ ಇದ್ದಳು!).... ಎಷ್ಟು ಸಲ ಅವಳಿಗೋಸ್ಕರ ನಾನು ಆ ಬಕ್ವಾಸ್ ಲೈಬ್ರರಿ ಲಿ ಕೂತಿಲ್ಲ...ಎಷ್ಟು ಸರತಿ ಅವಳ ಜೊತೆ ರಾತ್ರಿಯೆಲ್ಲಾ ಚಾಟ್ ಮಾಡಿಲ್ಲ.... ಎಷ್ಟು ಮಾಡಿದೀನಿ.. ಇಷ್ಟೆಲ್ಲಾ ಆದರೂ ಆ Relationship ಗೆ ಹೆಸರು ಏನು ಅಂತಾ ಅರ್ಥ ಆಗ್ತಾ ಇರಲಿಲ್ಲ..... !

One Fine morning... ಹೀಗೇ ಮಾತಾಡ್ತಾ ಮಾತಾಡ್ತಾ ಕೇಳಿದೆ.. "ನನ್ನ ಬಗ್ಗೆ ಏನ್ ಅನ್ಸತ್ತೆ ???" ..... ಸ್ವಲ್ಪ ಶಾಕ್ ಆದಳು.. ಎಷ್ಟೆ ಆದರೂ Future ಇಂಜಿನಿಯರ್, ನನಗೂ ೧ ದೊಡ್ಡ ಶಾಕ್ ಕೊಟ್ಟಳು.... "ನೀನು ನನ್ನ Best Fren ಕಣೋ, ನನಗೆ ಸಕ್ಕತ್ Care ತಗೋತೀಯ...Be the same.. Change ಆಗಬೇಡ..." . Huh !! Wat Rubbish!! ಅಂದುಕೊಂಡೆ..... ಜಾಸ್ತಿ ಮಾತಾಡೋದು ಬೇಡ ಅನ್ನಿಸಿ ಹಾಗೇ ಬಿಟ್ಟು ಬಿಟ್ಟೆ...... ಹೃದಯಕ್ಕೂ ಬಾಯಿಗೂ ನಡುವೆ ಒಂದು Low pass filter ಹಾಕಿ ಸುಮ್ಮನೆ ಆಗಿಬಿಟ್ಟೆ .....Sweet Memories ಹಾಗೇ ಇರಲಿ ಅಂತಾನೋ ಏನೋ ಗೊತ್ತಿಲ್ಲ ......ಆದರೆ ಪ್ರಣಯ ರಾಜ ಶ್ರೀನಾಥ್ ಹೇಳಿದ್ದ ಹಾಡು ನೆನಪಿಗೆ ಬಂತು.. "ನೀನೇ ಸಾಕಿದ ಗಿಣಿ.. ನಿನ್ನಾ ಮುದ್ದಿನಾ ಗಿಣಿ..."

ಸರಿ ಹೀಗೇ ಒಂದು ದಿನ ಸಿಕ್ಕಿ ಹೇಳಿದ್ಲು "ನಮ್ಮಣ್ಣ US ನಲ್ಲಿ ಇದ್ದಾನೆ, ಅಲ್ಲಿ ಹೋಗಿ MS ಮಾಡ್ತೀನಿ, ಅಲ್ಲೆ Job ಕೂಡ ಹುಡುಕ್ತೀನಿ.... ನಿಂಗೆ Mail, Chat ಮಾಡ್ತಾ ಇರ್ತೀನಿ..." Second time ಕಾಗೆ ಆದೆ....

ಇನ್ನೊಂದ್ ಹಾಡು ನೆನಪಿಗೆ ಬಂತು... ನೂರೊಂದು ನೆನಪು ಎದೆಯಾಳದಿಂದ........

ಈಗಲೂ ಕೂಡ ಆ ನೂರೊಂದು ನೆನಪು ಇದೆ... But ಆ ನೆನಪಿನ ಸೂತ್ರಧಾರಿನೂ ಇಲ್ಲ.... ಆ ನೆನಪು ಗಳನ್ನ ಮುಂದೆ ತಗೊಂಡು ಹೊಗಕ್ಕೆ ಅ ದಿಲ್ ಕೂಡ ಇಲ್ಲ...ಬರೀ ನೆನಪುಗಳು ಅಷ್ಟೆ... :(

ಯಾವುದಾರೂ ವಿಮಾನ ನೋಡಬೇಕಾದರೆ ನನ್ನ ಹುಡುಗಿ ಕಾಣಿಸ್ತಾಳಾ ಅಂತಾ ಈಗ್ಲೂ ಕೂಡ ನೊಡ್ತೀನಿ... ಕಾಯ್ತೀನಿ.. ಕಾಯ್ತಾನೇ ಇರ್ತೀನಿ..

ಮುಗಿಸಿದ...ನಮ್ಮ ಸತೀಶ.



ಇದೆಲ್ಲಾ ಆದರೂ ಸತೀಶನ ಹುಡುಗಿ ಹೆಸರು ????.. ಬೇಡ ಬೇಡ. ಅದು ಅವನ ನೆನಪಿನಲ್ಲೇ ಇರಲಿ....


ಈಗ ಪೂರ್ತಿ ಬರೆದು...ಹಿಂದೆ ತಿರುಗಿ ಓದಿದೆ... ನನ್ನ ಹಳೆಯ ಪುಸ್ತಕದ ಹಾಳೆಗಳು ಹಾಗೇ ಒಂದು ಸಲ ಕಣ್ಣ ಮುಂದೆ ಮಿಂಚಿ..ಮಾಯವಾಗಿ ಹೋಗದೇ... ಗೀಚಿ ಆಗಿರುವ ಮತ್ತೆಂದಿಗೂ ಮಾಯದ ಗಾಯದ ಗುರುತುಗಳನ್ನು ಮತ್ತೊಮ್ಮೆ ನೆನಪಿಸಿದವು..

ನಿಮಗೆ ಏನ್ ಅನ್ನಿಸಿತು? ನಿಮ್ಮಲ್ಲಿ ಎಷ್ಟು ಜನಕ್ಕೆ ವಿಮಾನ...ಬಸ್ಸು...ರೈಲಿನ ಸದ್ದುಗಳು ಹಳೆಯ ಪುಸ್ತಕದ ಹಾಳೆಗಳನ್ನು ತಿರುಗಿಸುತ್ತವೆ ಎಂದು Comments / Email ಮೂಲಕ ತಿಳಿಸಿ... :)

8 comments:

Unknown said...

Super maga. Server episode ginta channagittu. I went back to my own college days....4th blck figargalu and class mates. My autograph tara savi savi nenapu savira nenapu..:-)

Unknown said...

its too good... :) if someone is not going down the memory lane even after reading this, then buiscuit haaktiddare ansathe...

Chethan said...

ಶರತ್, ಎಲ್ಲರ ಮರೆತು ಹೋದ ಸವಿ(?) ನೆನಪನ್ನ ಕೆದುಕಿದ್ದೀಯ ಮಗ.
ಸೊಗಸಾದ ಬರವಣಿಗೆ. ಹೀಗೆ ಮುಂದುವರೆಸು. ಶುಭ ಹಾರಿಸುತ್ತಾ, ಚೇತನ್

Santosh Rao said...

ಉರುಳುಬಿದ್ದ ಮರದ ಕೊರಡೊಳು..
ಹೂವು ಹೂವು ಅರಳಿ..

Vijayaraghavan said...

Sharatha----Ninna baravanige tumba channgi eide, excellent naration.Swalpa time madikondu baritha eiru..........Talent maga

Susheel Sandeep said...

"ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲೀ...."
ಸೂಪರ್ ಮಗಾ...ಹಳೇ ನೆನಪನ್ನ ಕೆದಕಿಸೋಮ್ ಈ ಎಪಿಸೋಡ್ ಓದೋವಾಗ ಬೆನ್ನುಹುರಿಯಲ್ಲಿ ಬೆವರು ಹರಿದಂಗಾಯ್ತು!ಮಸ್ತ್ ಮಜಾ ಬಂತು ಓದಿ...ನಿಂ ಹುಡುಗ ಈಗಲೂ ಏರೋಪ್ಲೇನ್ ನೋಡಿ ಸೈಲೆಂಟ್ ಆಗಿ ಟಾಟಾ ಮಾಡ್ತಾನ?

Viji said...

ಶರತಾ, ಒಳ್ಳೆ ಬ್ಲಾಗ್ ಕಣೋ. ನೆನಪುಗಳು ಮಧುರ ಹಾಗು ಅಮರ.
ಕಾಲೇಜ್ ಲೈಬ್ರರಿ, ಇಂಟರ್ನೆಟ್ ಕೆಫೆ, ಇದೆಲ್ಲಾ ಜ್ಞಾಪಕಕ್ಕೆ ಬರುತ್ತೆ.
ನಿನ್ನ ಕಥಾ ಸಂಗಮವನ್ನು ಹೀಗೆ ಮುಂದುವರಿಸು.
ಇಂತಿ,
ವಿಜಯ್ ಶರ್ಮ.

Shreyas said...

Good one kano...sathisha ondu sala nanage helidda...