ಸರ್ವರ್ ಅಂದ್ರೆ?!!

Scene: First year computer practical exam.
Venue: College Computer Lab
Time: The worst possible time... :
ಸೂಚನೆ: ಹಳೆಯ ಒಂದು email ಕಥೆಗೆ ಬೆಳವಣಿಗೆಯ ರೂಪ...ಮೂಲ ಕಥೆಗಾರನಿಗೆ ನಮನಗಳು

ಇಂಜಿನಿಯರಿಂಗ್ ಮೊದಲನೆ ವರ್ಷದ ಕೊನೆಯ ದಿನ... ಆದ್ರೆ ಇನ್ನು ಒಂದು ದೊಡ್ಡ ಬೆಟ್ಟ ಕಣ್ಣ ಮುಂದೆ 'Computer Practical' !!!

CPU ಅಂದರೆ ಏನು, ಮಾನಿಟರ್ ಅಂದರೆ ಏನು.. ಇಷ್ಟು ಬಿಟ್ಟು ತಲೆ ಬುಡ ಗೊತ್ತಿರಲಿಲ್ಲ ಆ ಕಾಲದಲ್ಲಿ ನಂಗೆ! ಈ ಥರಾ ಸೀನ್ ನಲ್ಲಿ final exam! ಬೆಟ್ಟ ಏನು... ಪರ್ವತ ಆಗಿತ್ತು!

ಸರಿ...ಒಂದು ಸಲ sorting program ನೋಡ್ಕೊಳ್ಳೋಣ... Scanf then printf….Oops…printf then scanf… # include iostream.h…#include conio.h…clrscr() !!!

ದೇವರೇ.. ಆ shared folder ಹಾಗೇ ಇರುತ್ತಾ...!?.. netsend command ವರ್ಕ್ ಆದ್ರೆ ಸಾಕು ! : ಕಾಪಾಡು ಶ್ರೀ ಸತ್ಯನಾರಾಯಣ....ಪನ್ನಗಶಯನ....ಪಾವನ.....ಛಿ! ಪಾವನ ಅಂದ್ರೆ ಅವಳೇ ನೆನಪಾಗಬೇಕಾ!!! ಕ.ಕಾಂ (ಕರ್ಮ ಕಾಂಡ)

ವಾ!!! ಅಲ್ಲಿದಾನೆ.... ಕುಡುಮಿ... ಇವನನ್ನ ಬಿಟ್ರೆ ಇಲ್ಲ ಅಂದುಕೊಂಡಿದಾನೆ.... first day ನೆ ಡೌಟ್ ಕೇಳಿದ್ನಲ್ಲಾ ಅವನು... "Sir, is it possible to store data on WordStar instead of Access? "

ಏನ್ ಡಬ್ಬಾ ನನ್ ಮಗ.... ಆಗ್ಲೆ latin.. greek ಎಲ್ಲಾ ಮಾತಾಡ್ತಾ ಇದಾನೆ!! ಮಾತಾಡದೆ ಇನ್ನೇನ್ ಮಾಡ್ತಾನೆ.. ಇದಾಳಲ್ಲ ಅವಳು ಪಾವನ... ತಗೋಬೇಕಲ್ಲ scope ಇವಳ ಮುಂದೆ ... ! ಕೂಲ್ ಆಗಿ ಏನೋ ಕಾಣಿಸ್ತಾನೆ... ಅಯ್ಯೋ ಇನ್ನು ೧೦ ನಿಮಿಷ ಮಾತ್ರ ಇದೆ! ಏನ್ ಏನ್ ನೋಡ್ಕೊಬೇಕು ಇನ್ನೂ! ! ... C came after B... C ಕಂಡು ಹಿಡಿದಿದ್ದು Dennis Ritchie..

ಕರೆಕ್ಟು...ಒಂದು ದಿನ ಕೇಳಿಸ್ಕೊಂಡಿದ್ದೆ... ಪಾವನ ಇವನ ಹತ್ತಿರ ಬಂದು ಕೇಳ್ತಾ ಇರೋದು...What is Ansi C??
ಕ.ಕಾಂ ನಂಗೆ ಅದೂ ಗೊತ್ತಿಲ್ಲ! ಬಹುಶ: Ansi ಅನ್ನೋ ಮನುಷ್ಯ ಕಂಡು ಹಿಡಿದಿದ್ದು ಅಂದುಕೊಂಡಿದ್ದೆ! so..C ನ ಕಂಡು ಹಿಡಿದಿದ್ದು Dennis ಮತ್ತು Ansi ಸೇರಿಕೊಂಡು! ಇಬ್ಬರೂ ಗಂಡ ಹೆಂಡತಿ ಇರಬೇಕೆನೋ ಪಾಪ !

lab assistant ಬಂದ.. ಬನ್ನಿರಪ್ಪಾ ಒಳಗಡೆ!!!!!!

ಅಂತು ಟೈಮ್ ಆಗೇ ಹೋಯ್ತು!!! ಅಬ್ಬಬ್ಬಾ ಅಂದ್ರೆ ಏನು! next time ಸರೀಗೆ ಓದಿಕೊಂಡು clear ಮಾಡಿದ್ರೆ ಆಯ್ತು... ಅಷ್ಟೆ! ಭಲಾ ಶರತ್... ತಲೆ ಕೆಡಿಸ್ಕೋಬೇಡ... ಇದೆಲ್ಲಾ ಹೊಸದಾ ನಿಂಗೆ.... ! ಜೈ ಅನ್ನಿಸು!

ಇಲ್ಲಿ ಕೈ ಮಾತ್ರ ನಡುಗುತ್ತಾನೆ ಇತ್ತು! ಕಾಲು ಕೂಡ!!.. ಪೂರ್ತಿ ದೇಹನೇ!!

ಓ!! ಅಲ್ಲಿದೆ ನನ್ನ system! ... ಇನ್ನು ಯಾರೂ ಕೂತಿಲ್ಲ!! shared drives!! ವಾಹ್! ಚಿಂದಿ!

ಇಲ್ಲಿ ಬಂದ lab assistant: "ಅದು ಬೇಡ... ಈ system ತಗೋಳಪ್ಪಾ! ರೋಲ್ ನಂಬರ್ ಪ್ರಕಾರ ಕೂತ್ಕೊಬೇಕು!" ಏನ್ ರೋಲ್ ನಂಬರ್! ನಿನ್ ಎಡಗಡೆ ಕೈ ಗೆ ಲಕ್ವಾ ಹೊಡಿಯ... "ಅದನ್ನೂ" ತೊಳ್ಕೊಳಕ್ ಆಗಬಾರದು ಮಗನೆ ಅಂತಾ ಬೈಕೊಂಡು ಕೂತೆ! ಸಧ್ಯಕ್ಕೆ ಇದೂ ಕೂಡ faculty ಇಂದ ದೂರನೇ ಇತ್ತು.

"ಎಲ್ಲರೂ ನಿಮ್ಮ ಮುಂದೆ ಇರೋ ಪೇಪರ್ ಒಳಗಡೆ ಇರೋ ಪ್ರೋಗ್ರಾಮ್ ಬರೀಬೇಕು. ಶುರು ಮಾಡಿ"

ಅಷ್ಟೆ... ನೋಡೇ ಬಿಡುವ... ಏನಿದೆ ಒಳಗಡೆ

Write a program to sort N natural numbers in ascending order and then perform search operation.
(PS: Use Bubble sort and binary search).

ಸಧ್ಯ! ಸರಿಯಾಗಿ mug ಮಾಡಿರೋ ಪ್ರೋಗ್ರಾಮ್ !! :) ಅರಳಿದೇ..ಅರಳಿದೇ...ಮುದುಡಿದ ತಾವರೆ......
#include stdio.h…#include iostream.h…#include conio.h..main()….

ಮುಗೀತು...ಅಬ್ಬಾ...ಇನ್ನೂ ಎಷ್ಟೊಂದು ಟೈಮ್ ಇದೆ! ಬೇರೆಯವರು ಏನ್ ಮಾಡ್ತಾ ಇದಾರೆ ನೋಡುವ... ಅಯ್ಯೋ..ಏನಿದು...ಎಲ್ಲರೂ ಹೋಗಿ ಆಗಿದೆ! ಅಷ್ತೊಂದು ಈಸಿ ಇತ್ತಾ!!!?

"ಶರತ್ ಆಯಿತೇನ್ರಿ ನಿಮ್ಮದು?"

"ಹೂಂ ಮ್ಯಾಮ್!"

"ಎಲ್ಲಿ..ಔಟ್ ಪುಟ್ ತೋರಿಸಿ"

ಇಲ್ಲೇ ಇದೆ ತಗೋಳಿ...ctrl+F9

"ಸರಿ.. OK ಅನ್ನಿಸತ್ತೆ...ಇನ್ನು ಸ್ವಲ್ಪ ನೀಟ್ ಆಗಿ ಮಾಡಬಹುದಾಗಿತ್ತು...its OK.. comments ಹಾಕಬೇಕು ಎಲ್ಲಾ ಕಡೆ...bla bla...one more bla..."

"ಈ ಯಮ್ಮಂಗೆ ಯಾರು ಒಪ್ಪಿಸಿ ಸಮಾಧಾನ ಮಾಡಕ್ ಆಗತ್ತಪ್ಪಾ!... ಪುಣ್ಯಾತ್ಮ ಅವನು ಗಂಡ ಅನ್ನಿಸಿಕೊಂಡವನು"

ಸರಿ.. ವಿಜಯೋತ್ಸಾಹದಿಂದ ಬಾಗಿಲ ಕಡೆಗೆ ಹೊರಟೆ.... "ಶರತ್ ಎಲ್ಲಿ ಹೊಗ್ತಾ ಇದೀರಾ?? ಇಲ್ಲಿ ಬನ್ನಿ... ಇನ್ನೂ viva ಬಾಕಿ ಇದೆಯಲ್ಲ ರೀ!"

ಸಿಕ್ ಹಾಕ್ಕೊಂಡನಲ್ಲಪ್ಪಾ!! ಮತ್ತೆ!!

“Please sit “
“Thank you “

“Okay !! Tell me..What is a computer?”
‘A computer is an electronic device……." ಅವನಜ್ಜಿ...ಮರೆತೇ ಹೋಯ್ತು definition !! :

“What r macros?”
"Sorry...??"

“What r libraries”
"Pardon me..."

“What are command line arguments?”
‘Don’t know mam’

“What are inbuilt functions?”
"Can u please repeat the question……??"

ಇವೆಲ್ಲಾ ಇದೇ ಸಬ್ಜೆಕ್ಟ್ ನಲ್ಲೇ ಇದಾವಾ? ಏನ್ ಕರ್ಮಾನೋ!

“Okay one last question…Show me where is the server in our lab”
ಓಹ್...ಸರ್ವರ್ ಅಂದರೆ ದೊಡ್ಡದಾಗಿರತ್ತೆ... ತುಂಬಾ ದೊಡ್ಡದೇ ಇರಬೇಕು... CPU, Monitor ಗಿಂತಾ... ಹೆಂಗಾದರು ಮಾಡಿ ಹುಡುಕಲೇ ಬೇಕು... ಎಲ್ಲಿದೆ?.. ಛೆ..ಅದಲ್ಲಾ.... ಇದೂ ಅಲ್ಲ...ಛಿ ಇದು switch board... ಇದೂ ಅಲ್ಲವಲ್ಲಪ್ಪ....ಇದು AC... ಎಲ್ಲಿರುವೆ....ಮನವ ಕಾಡುವ....ಹಾಡು ಬಂದರೆ ಮತ್ತೆ ಪಾವನ ನೆನಪು.... ಥೂ ತ್ತೆರಿಕಿ..... ಸರ್ವರ್ ಎಲ್ಲಿದೆಯಪ್ಪಾ?...

"ರೀ chair ಮೇಲೆ ಕೂತ್ಕೊಂಡು round ತಿರುಗಿದ್ದು ಸಾಕು....Tell me which is the server?"

ಅಡ್ಡೇಟ್ ಮೇಲೆ ಗುಡ್ಡೇಟು..ಹೊಡೆದೇ ಬಿಡುವ... ಅದು ನೋಡಕ್ಕೆ ಸರ್ವರ್ ಥರಾ ನೆ ಇರೋ ಹಾಗಿದೆ....

"There it is" (UPS ಕಡೆ ಕೈ ತೋರಿಸುತ್ತಾ... ಆದರೆ ಆ ಯಮ್ಮ system ಕಡೆ ತೋರಿಸ್ತಾ ಇದೀನಿ ಅಂದುಕೋತು.)

"Good..ಆಗಲೇ ಹೇಳೋದಲ್ಲವೇನ್ರೀ ಶರತ್...ಗೊತ್ತಿದೆ ಅಂತಾ... in fact ಇಡೀ class nalli ಯಾರೂ ಸರೀಗೆ ತೋರಿಸಲಿಲ್ಲ...Good keep it up!!"

“Thank you mam..thanks a lot…”

ಹಾಡು: ಅ.. ಕುಣಿದೂ..ತಾಳಕ್ಕೆ ಕುಣಿದೂ...ನನ್ನಂತೇ...ಹೇ..ಸಂತೋಷಕ್ಕೆ.... :)

ಕೊನೇ ಬಾಲು... ಸಿಕ್ಸರ್.... ಚಿಂದಿ ಚಿತ್ರಾನ್ನ !!

ಅವತ್ತಿಂದಾ... ಹಿಂದೆ ತಿರುಗಿ ನೋಡೇ ಇಲ್ಲ.... ಕೆಲವೇ ದಿನಗಳಲ್ಲಿ...class ನಲ್ಲಿ ಹೀರೋ ಆಗಿದ್ದೆ ... ಜನ doubts ಇಟ್ಟುಕೊಂಡು ನನ್ನ ಹತ್ರ ಬರೋವ್ರು!! Doubts clear ಕೂಡ ಮಾಡಿದೆ!

ಕೊನೇಗೆ ಒಂದು ದಿನ...ಅವಳೂ ಬಂದಳು...ಪಾವನ... " ಶರತ್ ANSI C ಅಂದರೆ ಏನು??" ಪಾಪ.. ಅವತ್ತಿನವರೆಗೂ Ritchie and Ansi ನ ಗಂಡ ಹೆಂಡತಿ ಅಂದುಕೊಂಡಿದ್ದಳೋ ಏನೋ...

ನಂಗೊತ್ತಿಲ್ಲಪ್ಪಾ... ;)
ನಿಮಗೆ? ಅನಿಸಿದ್ದನ್ನು comments ನಲ್ಲಿ ಬರೆಯಿರಿ :)

5 comments:

sriharsha said...

correct maga---
super

Satisha said...

anna.. suuperr aagi idhe..yella engieergala kathe nu idhe... yella othala hodedhu engg aagirovre... jai karnataka maathe..

Sudhi said...

Chennagide sharath! buttttt..tatkal passport tumba chennagittu :)

Santosh Rao said...

ಮಸ್ತಾಗಿ ಇದೆ..

Unknown said...

Super! 'pavana' aitu manassu..