ತತ್ಕಾಲ್ - ಪಾಸ್ ಪೋರ್ಟ್ - ಅನುಭವ

ತುಂಬಾ ದಿನಗಳ ನಂತರ ಬರೆಯುವುದಕ್ಕೊಂದು ಸರಕು...ಸಮಯ ಎಲ್ಲಾ ಸಿಕ್ಕಿದೆ.... ಏನ್ ಅನ್ನಿಸತ್ತೆ ಹೇಳಿ :)

ತತ್ಕಾಲ್ ಪಾಸ್ ಪೋರ್ಟ್

ಎಂದಿನಂತೆ ಮಾನಿಟರ್ ಒಳಗೆ ಮುಳುಗಿದ್ದೆ... ಪಿ.ಎಂ. ಬಂದು ಪಕ್ಕದಲ್ಲಿ ನಿಂತ್ಕೊಂಡು, ಪಾಸ್ ಪೋರ್ಟ್ ಕೊಡು ಈಗ್ಲೇ! ಅಂದಾಗಲೇ.... ಛೇ ಮುಂಚೆನೇ ಮಾಡಿಸಿಬಿಡಬೇಕಿತ್ತು ಅಂತಾ ಅನ್ನಿಸಿದ್ದು...

Me - I don’t have it, sir.

PM – what! Don’t have a passport!

Me – No sir.

PM – well then get it done.

Me – alright.

ಎರಡು ದಿನ ಕಳೆದ ಮೇಲೆ..Client letter ಹಾಗೂ office letter ಕೈ ಲಿ ಹಿಡ್ಕೊಂಡು...ಅರ್ಜಿ ತುಂಬಿಸಿ..ಅಪ್ಪನ ಆಫೀಸಿಗೆ ಹೋದೆ. Verification form (VC) ತಗೊಳಕ್ಕೆ. ಆ ಮನುಷ್ಯ ತಣ್ಣನೆ ವ್ಯಕ್ತಿ ಥರಾ ಕಾಣಿಸ್ತಿದ್ದ. ಒಂದು ಸಲ ನನ್ನ ಮುಖ ನೋಡಿ.. "ಎಷ್ಟು ಹುಡುಗೀರು ಇದಾರಪ್ಪ ಹಿಂದೆ?" ಅಂದು ಬಿಡೋದಾ ಆಸಾಮಿ! ನಾನು ಹಾಗೇ... ಯಾರು ಇಲ್ಲ ಅಂದೆ.

ಅವನು: ಇಷ್ಟು ಹೊತ್ತಿಗೆ ಕಮ್ಮಿ ಅಂದ್ರೂ... ೪ - ೫ ಇರಬೇಕಿತ್ತು ಅಂದ.

ನಾನು: (ವಾಹ್! ಏನ್ ಖುಷಿ ;) ) ನಗು.

ಅವನು: ಯಾಕೆ?

ನಾನು: (ಇವನು ಏನಪ್ಪಾ serious ಆಗ್ತಿದಾನೆ!) ಇಲ್ಲ...ನಾನು ಒದಿದ್ದು Mechanical ಅದಕ್ಕೆ ಯಾರೂ ಇಲ್ಲ!

ಅವನು: ಇಲ್ಲ..ಯಾವುದಾದ್ರು bus stop ಹತ್ರ ಹೋಗಿ ಒಂದು ಹುಡುಗೀಗೆ smile ಕೊಡು..ನಿನ್ ಹಿಂದೆ ಬರೋದು guarantee!

ನಾನು: (ಅಯ್ಯೋ ರಾಮ! ಇವನು ಯಾಕೋ ನನ್ನ ಹಿಂದೇನೆ ಬಿದ್ನಲ್ಲಪ್ಪ ಪುಣ್ಯಾತ್ಮ!)ಹ..ಹ..ಹಾ.. ನಕ್ಕಿದೆ.

ಅವನು: ಅಮೆರಿಕಾಗೆ ಹೋಗ್ತಾ ಇದೀಯ... ಹುಷಾರು...ಅಲ್ಲಿ ಬಾಯಿಗೆ ಇಟ್ಟು ಬಿಡ್ತಾರೆ.

ನಾನು: (ಏನ್ ಬಂದಿರೋದು ಇವನಿಗೆ!) ಏನ್ ಇಡ್ತಾರೆ ಬಾಯಿಗೆ!?

ಅವನು: ಮುತ್ತು

ನಾನು: (ನಿಟ್ಟುಸಿರು! huh!) smile :)

ಅವನು: ಅಲ್ಲಿ ಜನಸಂಖ್ಯೆ ಕಮ್ಮಿ. ಯಾಕೆ ಗೊತ್ತಾ? ಅವರು ಬಾಯಿಗೆ ಇಡ್ತಾರೆ. "ಅಲ್ಲಿ" ಇಡೋಲ್ಲ!

ನಾನು: (ಕರ್ಮ ಕಾಂಡ...ಈ ವಯ್ಯಂಗೆ ಏನೋ serious probs ಇದೆ! ಪಕ್ಕ ಅಪ್ಪ ಕೂತಿದಾರೆ...ಇವನು ನೋಡಿದ್ರೆ...ಅಲ್ಲಿ ಇಡ್ತಾರೆ, ಇಲ್ಲಿ ಇಡ್ತಾರೆ ಅಂತಾನೆ!) ಗಾಬರಿ ಆಗಿದ್ರೂ...ಮತ್ತೆ smile ಕೊಟ್ಟೆ .

ಕೊನೇಗೂ VC ಸಿಕ್ತು! ಸೀದಾ..ಪಾಸ್ ಪೋರ್ಟ್ ಅಫೀಸಿಗೆ ದೌಡಾಯಿಸಿದೆ. Q ನಲ್ಲಿ ನಿಂತಾಗ ಗಂಟೆ ೧೧:೨೫. ಆಗ ಗೊತ್ತಾಯ್ತು ೧೨ ಗಂಟೆ ಆದ ಮೇಲೆ ಯಾರನ್ನೂ ಒಳಗಡೆ ಬಿಡಲ್ಲ ಅಂತಾ. ಹಾಗೇ ಗಾಬರೀಲಿ ನಿಂತು...ಅಂತೂ ಒಳಗಡೆ ಹೋದೆ!

ಖುಷಿಯಿಂದಾ ಎಲ್ಲಾ ದಾಖಲೆಗಳನ್ನೂ ಅವನಿಗೆ ತೋರಿಸಿದೆ...ಅವನು ಎಲ್ಲಾ ನೋಡಿ.." Annexure I ತಗೊಂಡು ಬಾ" ಅಂದ.

ನಾನು: ಅದು ಏನು? ನಾನು ಎಲ್ಲಾ ತಂದಿದೀನಿ ಫಾರಂ ನಲ್ಲಿ ಬರೆದಿರೊದೆಲ್ಲಾ!

ಅವನು: ಮಹಡಿ ಗೆ ಹೋಗಿ..ಸಿಗತ್ತೆ.

ಮಹಡಿಗೆ ಹೋದೆ. Counter ನಲ್ಲಿ : ಸಾರ್, Annexure I ತಗೋಬೇಕಾ? ಯಾಕಂದ್ರೆ ನನ್ನ ಹತ್ರ ಆಗಲೇ VC ಇದೆ ಅಂದೆ. ಅವನು..ಹಾಗಿದ್ರೆ ಏನೂ ತೊಂದರೆ ಇಲ್ಲ ಬಿಡಿ ಅಂದ. ಇನ್ನೊಮ್ಮೆ confirm ಮಾಡಿಕೊಳ್ಳಕ್ಕೆ ನನ್ನ ಹಾಗೇ ಬಂದಿದ್ದ ಇನ್ನೊಂದು ಮಿಕ ಅಲ್ಲಿ ನಿಂತಿತ್ತು. ಅವನೂ ಏನೂ ಬೇಕಾಗಿಲ್ಲ ಅಂದಮೇಲೆ...ನಿರಾಳವಾಗಿ ನನ್ನ ನಂಬರ್ ಬರೋದನ್ನ ಕಾಯುತ್ತಾ ಕೂತೆ. ಟೋಕನ್ ನಂಬರ್ - ೨೬೮ ! ಈಗ ತಾನೇ ಕರೆದಿದ್ದು ೧೨೫!

ಒಂದೂವರೆ ಗಂಟೆ ಕಾದ ನಂತರ "೨೬೮" counter ge ಓಡಿದೆ!

ನನ್ನ Documents ಎಲ್ಲಾ ನೋಡಿದಮೇಲೆ ಆಸಾಮಿ ಹೇಳಿದ : ಒಂದು ಅರ್ಜಿ ಬರೆದು ಕೊಡಿ "ನನಗೆ ಪಾಸ್ ಪೋರ್ಟ್ ಬೇಕು" ಅಂತಾ.

ಹೀಗೆ ಅಂತಾ ಒಂದು ಬೋರ್ಡ್ ಹಾಕೋಕೆ ಏನು ರೋಗ ಅಂತಾ. ಒಂದೂವರೆ ಗಂಟೆ ಸುಮ್ಮನೆ ಕೂತ್ಕೊಂಡು ಓತ್ಲಾ ಹೊಡೆದೆ. Counter ಗೆ ಬಂದ್ರೆ..ಏನೋ ಹೊಸದಾಗಿ ಕೇಳೋದು! ಕರ್ಮ!

ಅಲ್ಲೇ ಯಾರೋ ಪುಣ್ಯಾತ್ಮನಿಂದ ಅರ್ಜಿ ಇಸ್ಕೊಂಡು ಬರೆದು ಕೊಟ್ಟೆ. Documents ಪಕ್ಕದ ಟೇಬಲ್ ಗೆ ರವಾನೆ ಆಯಿತು. ಅವನು ಅದನ್ನ ಪರಾಂಬರಿಸಿ:

ಅವನು: Annexure I ಎಲ್ಲಿ?

ನಾನು: (ಗಾಬರಿ!) ಸಾರ್ ಅಲ್ಲಿ ಆ ಕೌಂಟರ್ ನಲ್ಲಿ ಕೇಳಿದ್ರೆ ...ಏನೂ ಬೇಡ ಅಂದ್ರು!

ಅವನು: ಯಾರ್ರೀ ಹೇಳಿದ್ದು?

ನಾನು: ಆ ಕೊನೇ ಕೌಂಟರ್ ನವರು.

ಅವನು: (ಕೊನೇ ಕೌಂಟರ್ ನತ್ತ ನೋಡಿ) ನೀವ್ ಹೇಳಿದ್ದಾ?

ಕೊನೇ ಕೌಂಟರ್: ಇಲ್ಲ! ನಾನೆಲ್ಲಿ ಹೇಳಿದೆ?

ನಾನು: (ಆ ಬೋ* ಮಗನ್ನ ಹಸಿದ ಸಿಂಹಕ್ಕೆ ಹಾಕಬಾರದಾ ಅಂದುಕೊಂಡು!) ಇಲ್ಲ ಸರ್! ನೀವೇ ಹೇಳಿದ್ದು!

ಕೊನೇ ಕೌಂಟರ್: ಇಲ್ಲ.

ನಾನು: (ಇನ್ನು ಉಪಯೋಗ ಇಲ್ಲ ಅಂದುಕೊಂಡು) ಸರಿ. ಈಗ ಏನ್ ಮಾಡೋದು ಸರ್!?

ಅವನು: Annexure I ತಗೊಂಡು ಸೋಮವಾರ ಬನ್ನಿ.

ನಾನು: ಆದ್ರೆ Annexure I ಎಲ್ಲಿ ಇರತ್ತೆ?

ಅವನು: Application ನಲ್ಲೆ ಇರತ್ತೆ ನೋಡಿ.

ನಾನು: ಇದರಲ್ಲಿ ಎಲ್ಲೂ ಇಲ್ಲವಲ್ಲ ಸಾರ್!

ಅವನು: ಎಲ್ಲಿ ನೋಡೋಣ... ಓಹ್...ಹೊಸಾ application ತಗೋಳಿ.

ನಾನು: (ಏನ್ ಹೊಸಾದು!) ನಾನ್ ನೆನ್ನೆ ತಗೊಂಡನಲ್ಲ ಸರ್!

ಅವನು: ತಗೊಳಕ್ಕೆ ಮುಂಚೆ annexure I ಇದೆಯಾ ಅಂತಾ ನೋಡಿ! ನಾಳೆ ಸೀದಾ ಒಳಗೆ ಬನ್ನಿ Q ನಲ್ಲಿ ನಿಂತುಕೋಬೇಕಾಗಿಲ್ಲ.

ನಾನು: ( ಓಹ್..ಇನ್ನು ಮೇಲೆ.. ನಾನು ಎಲ್ಲ ಹೊಸಾದು ಕೇಳಬೇಕು...ತಗೋವಾಗ...ಹೊಸಾ application, ಹೊಸಾ petrol, ಹೊಸಾ medicine, ಹೊಸಾ c****m!)

ದಿಕ್ಕು ತೋಚದೆ ಮನೆ ಕಡೆ ಹೆಜ್ಜೆ ಹಾಕಿದೆ.


ಶನಿವಾರ ಮೇಯೋ ಹಾಲ್ ನಲ್ಲಿ ಅಲೆದು...ರೂ. ೩೫೦/- ತೆತ್ತ ಮೇಲೆ...ನಾನು ಯಾರೂ ಅಂತಲೂ ಗೊತ್ತಿಲ್ಲದ ಒಬ್ಬ ಆಸಾಮಿ ನನಗೆ annexure I ಕೊಟ್ಟಾಗಿತ್ತು! ಇದಕ್ಕೆ paasport ಆಫೀಸಿನಲ್ಲಿ ಎಲ್ಲಿಲ್ಲದ ಬೆಲೆ! ಕ.ಕಾಂ!

ಸೋಮವಾರ ಬೆಳಗ್ಗೆ...ಕಾವೇರಿ ಬಂದ್! ಆದರೂ ಹೋದೆ... ರಸ್ತೇಲಿ ಹೋಗುವಾಗ! ನಾನೇ ರಾಜ.... ಆಹಾ! ೧೯೮೦ ರ ಬೆಂಗಳೂರು ಹೀಗೆ ಇತ್ತೇನೊ!

ಆಚೆ ನಿಂತಿದ್ದ ಪೊಲೀಸಪ್ಪ ಹೇಳಿದ... ಅರ್ಧ ಗಂಟೆ ಹಿಂದೆ ಆಫೀಸ್ ಬಂದ್ ಮಾಡಬೇಕು ಅಂತಾ ಆರ್ಡರ್ ಆಯಿತು!

ದಾರಿಗೆ ಸುಂಕ ಇಲ್ಲ...ನಾಳೆ ಹೇಗಾದರೂ submit ಮಾಡಬೇಕು ಅಂದುಕೋತಾ ಮನೆಗೆ ಬಂದು ಬಿದ್ಗೊಂಡೆ.

ಬೆಳಗ್ಗೆ ೯:೨೦ ಹೋದೆ... ಅದೇ ಪೊಲೀಸಪ್ಪ ನನ್ನ ಮಖ ನೋಡಿ ಹೋಗಿ ಸಾರ್ ಅಂತಾ ಬಿಟ್ಟ.. ನನ್ನ ದುರಾದ್ರುಷ್ಟಕ್ಕೆ annexure I ತಂದೆ ಅಂತಾ ಹೇಳಿದರೂ ಆ ಮನುಷ್ಯ ನನ್ನ ನಂಬರ್ ಕರೆಯೋವರೆಗೂ ಕೂತ್ಕೋ! ಅನ್ನೋದಾ! ಸರಿ...ಇನ್ನೇನ್ ಮಾಡೋದು ಅಂತಾ ಕುಕ್ಕರಬಡೆದೆ. ಯಾವ್ ನಂಬರ್ ಕರೀತಿದಾರೆ ಅಂತಾ ನೋಡಿದ್ರೆ....೫! ನಂದು...೨೬೮! ಹಮ್.... ನನ್ನ ಟೇಮ್ ಸರೀ ಇಲ್ಲ! ತಿಂಡಿನೂ ತಿಂದಿಲ್ಲ ಬೆಳಗ್ಗೆ! :

೪ ಗಂಟೆ ಕಾದಮೇಲೆ...೨೬೮.... ಓಡಿದೆ! ... ಎಲ್ಲಾ ನೋಡಿದಮೆಲೆ... ಮೇಲಿನ officer ಹತ್ರ ಹೋಗಿ ಅಂದಾ.. cabin ಒಳಗೆ ಹೋದೆ... ಆ officer ಒಂದು ಸಲ ನೋಡಿ... ಸೀದ documents ನ ಪಕ್ಕಕ್ಕೆ ಇಟ್ಟು ತಗೋಳಕ್ಕೆ ಆಗಲ್ಲ ಇದನ್ನ....!!!!! ನಿಮಗೆ VC ಕೊಟ್ಟವರಿಗೆ ಒಂದು ID card ಮಾಡಿಸಕ್ಕೆ ಆಗಲ್ವಾ?

(VC ಕೊಟ್ಟ ಆಸಾಮಿ ಆಗ ತಾನೆ ಪ್ರೊಮೋಷನ್ ಸಿಕ್ಕು designation ಬದಲಾಗಿದೆ. ID ಬದಲಿಗೆ, ಸಮನಾದ letter ಕೊಟ್ಟಿದ್ದರು)

ನಾನು: ಸರ್ ಆದರೆ...ಈ ಲೆಟರ್ ಇದ್ಯಲ್ಲಾ... ID ಇಲ್ಲಾಂದ್ರೆ ಏನು!?

ಅವನು: ನಾನು ತಗೊಳಲ್ಲಾ...ಅಷ್ಟೆ...ID ಮಾಡಿಸಕ್ಕೆ ಅವರಿಗೆ ಏನು ಅಂತಾ?

ನನಗೆ ಕಣ್ಣೆಲ್ಲ ಕಪ್ಪುಗಟ್ಟಿದ ಹಾಗೆ ಆಗಿ...ತಲೆ ಸುತ್ತು ಬರೊದು ಒಂದು ಬಾಕಿ ಅಷ್ಟೆ! ಹಾಗೇ ಡ್ರೈವ್ ಮಾಡ್ಕೊಂಡ್ ಮನೇಗೆ ಬಂದೆ. ತಲೆ ಎಲ್ಲಾ ಚಿಂದಿ ಚಿತ್ರಾನ್ನ ಆಗಿ ಹೋಗಿತ್ತು...ಅಪ್ಪಂಗೆ ಫೋನಾಯಿಸಿ...ಎಲ್ಲಾ ಹೇಳಿದೆ....ಆಗ ಅವರು ಹೇಯ್...ಅವರು ID ಮಾಡಿಸಿ ಆಗಿದೆ...ನಾನಾಗಲೇ ಒಂದು ಕಾಪಿ ನ ನಿನ್ನ ಟೇಬಲ್ ಮೇಲೆ ಇಟ್ಟಿದ್ಡನಲ್ಲಾ! ... ಓಡಿ ಹೋಗಿ ನೋಡಿದೆ...ಏನೂ ಕಾಣಿಸಲಿಲ್ಲ...ಆಮೇಲೆ...ನೆನಪು ಮಾಡಿಕೊಂಡಾಗ.... ಬೆಳಗ್ಗೆ ಯಾವುದೋ ಎರಡು xerox ಪೇಪರ್ ಗಳನ್ನು ಹಾಗೇ ನನ್ನ file ಓಳಗೆ ತುರುಕಿದ್ದ ನೆನಪಾಗಿ...file ನೋಡಿದ್ರೆ!.. ಅಲ್ಲೇ ಇವೆ ID card copies!! ಬೆಳಗ್ಗೆ ಇಂದಾ ಈ file ನನ್ನ ಜೊತೆನೇ ಇದೆ! !!! ಇದಕ್ಕೆ ಇನ್ನೇನ್ ಹೇಳೋದ್ ಹೇಳಿ!

ಮತ್ತೆ ಎದ್ದೂ ಬಿದ್ದೂ passport office ಕಡೆ ಹೋದೆ... ಅಲ್ಲಿ ಕಾಡಿ ಬೇಡಿ ಹೊಸ ID ತೋರಿಸಿ...officer ಕೈಲಿ ಕೊನೇಗೂ ಸಹಿ ಮಾಡಿಸಿದೆ!

ನಾನು: ಹಣ ಎಲ್ಲಿ ಕಟ್ಟೋದು?

ಅವನು: ಇಷ್ಟೊತ್ತಿಗೆ ಕೌಂಟರ್ ಮುಚ್ಚಿರಬಹುದು!

ಕೌಂಟರ್ ಹತ್ರ ಓಡಿ...೨೦ ನಿಮಿಷ Q ನಲ್ಲಿ ಜೀವ ಕೈಲಿ ಹಿಡ್ಕೊಂಡು ನಿಂತಿದ್ದೆ! ಕೊನೇಗೆ ನನ್ನ ಸರದಿ... ಆ ಯಮ್ಮ ನನ್ನ application ನ ಇಸ್ಕೊಂಡು ನೋಡಿ... ಯಾವುದೋ ಬೇರೆ ಗ್ರಹದಿಂದ ಬಂದಂತೆ ನೋಡ್ತಾ ಇದ್ಲು... ಇಷ್ಟೊತ್ತು...death certificates ಮಾತ್ರ ತಗೊಂಡು...ಈಗ pass port form ನೋಡಿ ಆಶ್ಚರ್ಯ ಆಯಿತೇನೋ ಪಾಪ!

ಆಮೇಲೆ ಕೇಳಿದ್ಲು: ಏನಿದು!?

ಹಾರ್ಟ್ ಅಟಾಕ್ ಆಗೋದು ಒಂದು ಬಾಕಿ ನನಗೆ! ತತ್ಕಾಲ್ ಫಾರಂ ಅಂದೆ.. (ಮನಸಲ್ಲಿ .. ಇದು ಟಾಯ್ಲೆಟ್ ಪೇಪರ್.. ಅಕಸ್ಮಾತ್ ಬೆಳಗ್ಗೆ ನೀವು ತೊಳ್ಕೊಂಡಿಲ್ಲ ಅನ್ನೋ ಪಕ್ಷದಲ್ಲಿ... use ಮಾಡಿ!)

ಸ್ವಲ್ಪ ಗೊಣಗಾಟದ ನಂತರ... ಇದು ಬೆಳಗ್ಗೆ ಅಲ್ವಾ? ಅಂದಳು... ನಾನು...ಹೌದು...ಒಂದು ಫಾರಂ ಮನೇಲಿ ಮಿಸ್ ಆಗಿತ್ತು ಅದಕ್ಕೆ ಲೇಟ್ ಅಂದೆ. ಕೊನೇಗೆ ದುಡ್ಡು ಕಟ್ಟಿಸಿಕೊಂಡಳು.

ನನ್ನ ಜೇಬಿನ ಭಾರ ೨೫೦೦ ರೂ ಕಮ್ಮಿ...ಆದರೆ ತಲೆ ಭಾರ ೨೫೦೦ ಟನ್ ಕಮ್ಮಿ ಆದಂತೆ ಆಯಿತು...

ನನ್ನ ಪಾಸ್ ಪೋರ್ಟ್ ಬರುವ ದಿನಾಂಕ ೧೯ ಅಂತಾ ಕೊಟ್ಟರು... ಆಫೀಸಿಗೆ ಬಂದರೆ ನನ್ನ ಸಹೋದ್ಯೋಗಿ (ಬೆಳಗ್ಗೆ passport ಆಫೀಸಿನಲ್ಲಿ ಸಿಕ್ಕಿದ್ದ) ಯ ದಿನಾಂಕ ೧೬ ಅಂತೆ... ಕೆಲ ಗಂಟೆಗಳ ನಿಜವಾದ ಅಂತರ ಮೂರು ದಿನಗಳು!

೧೩ ರ ರಾತ್ರಿ ೧೦ ಗಂಟೆ. . ಪ್ರಾಜೆಕ್ಟ್ kick off ಮೀಟಿಂಗ್ ನಲ್ಲಿ ಕೂತಿದ್ದೆ... ಎಲ್ಲಾ ಸರೀಗೆ ಇದ್ದಿದ್ದ್ರೆ ಆಗ ನಾನು US ನಲ್ಲಿ ಇರಬೇಕಿತ್ತು!

ಮೀಟಿಂಗ್ ಶುರುವಾಗುವುದನ್ನೇ ಕಾಯುತ್ತಿದ್ದಾಗ onsite co-ordinator ಕಾಲ್ ಬಂತು. "The client had expected SPAN resource to be in US today and due to the delay that we are causing them, they have decided not to have any additional onsite resource for this project. But don’t worry”

ನಾನು: ????????




ಮೂಲ: ಶ್ರೇಯಸ್ (ಇಂಗ್ಲಿಷಿನಲ್ಲಿ)

9 comments:

Unknown said...

sharath neenu engagement aada mele tumba poli aagta idiya. Ramya ee article na odakke kottideeya. odi saree baitale nodu. aadaru ninna baravanigeya shaili tumba chennagide. samaya hondisikondu khandita bareeta iru.

Unknown said...

Blog is too good, as usual!!! One more out of your writing skill!! But you seriously seem to have a lot patience and interest in doing this, thats calls for an appreciation and toast... keep going on Dude.... :)

Unknown said...

masta agide guru.. maja bantu.. passportu.. rationcardu.. voteridcardu.. buspassu.. illella.. idi kategalu. aadru nen bardiro reeti majvagide.. keep writing..

Chethan said...
This comment has been removed by the author.
Chethan said...

ಬರಹ ತುಂಬ ಚೆನ್ನಾಗಿದೆ. ಸ್ವಲ್ಪ ಬಯ್ಗುಳಗಳನ್ನ ಕಡಿಮೆ ಮಾಡಿದ್ರೆ ಇನ್ನೂ ಚೆನ್ನಾಗಿರುತ್ತೆ!!!
ಇನ್ನ್ನೂ ಹೀಗೆ ಬರೀತ ಇರು ಶರತ.
-ಚೇತನ್

Madhuri said...

ondu varusha dinda heltidde pass port madskolo anta.. keldya nan maatu? keliddare iga neenu US nalli irtidde! adikke helodu madhuri helodanna kelu anta.. igaladaru gottaita?

me: adare blog as usual chennagidhe..
u: (ful on top)as usual alwa ;)
me: toooooooooo much ok!

Unknown said...

too much maga....yeno exp...and what a way to narate....thats too good......i am really surprised with the VC....i wonder how he became the VC:)

Gopal said...

Sorry to hear that man.. You seem to be going through a rough patch. Don't worry keep the same spirit...

Unknown said...

Super maga. Inmele regular agi post madu.