ಕೊಡೈ ಕೆನಾಲ್ - ಒಂದು ಪ್ರವಾಸ

ಎಲ್ಲಾ ಶುರು ಆಗಿದ್ದು ಜೆ.ಪಿ. ನಗರದ "ಇಂಚರ" re union ಹಾಗೂ ಗಾಂಧಿ ಬಜಾರಿನ "ರಾಜಧಾನಿ" ಮೀಟಿಂಗಿನಲ್ಲಿ. ಅಂತಿಮವಾಗಿ ಕೊಡೈ ಅಂತಾ ತೀರ್ಮಾನ. ಅಬ್ಬಾ ಈ ಗೂಬೆ ಹರ್ಷನ್ನ ಒಪ್ಪಿಸೋದಂದ್ರೆ...ಉಫ್.... ಅದೇನೊ ಅಂತಾರಲ್ಲ... ಊರ್ ನೋರಿಗೆ ಒಂದು ದಾರಿ ಅಂದ್ರೆ... ಮನೆ ಹಾಳಂಗೆ ಒಂದು ಅಂತಾ...ಆದರೂ ಅರ್ಧ ಮನಸ್ಸಿನಿಂದ ಒಪ್ಪಿಕೊಂಡ ಮಹಾರಾಯ.ಹೂಂ... ಕೊನೇಗೂ ಹೊರಟಿದ್ದೆವು.....ಕೊಡೈ ಕೆನಾಲ್ ನ ಆ ಛಳಿ......ಬುಕ್ ಮಾಡಿದ್ದ Chevrolet Tavera with Dual A/C, Deluxe hotel rooms...(Thanks to Kumara for the holiday package) ಇವೆಲ್ಲಾ ಊಹಿಸಿಕೊಂಡೇ ಒಂಥರಾ excitements...


ಈ ಬಾರಿ ಕೈ ಕೊಟ್ಟವರ ಲಿಸ್ಟಿಗೆ : ಸುಧೀರ, ಪ್ರದೀಪ ಹಾಗೂ ಗುರು ಪ್ರಸಾದ. ಬಾಕಿ ಹುಡುಗ್ರು ಮುಂಚೆನೇ ಇಲ್ಲ ಅಂದಿದ್ರು. ಹಾಗಾಗಿ ಹೊರಟವರ ಪೈಕಿ ನಾನು, ಗಿರೀಶ, ಗೋಪಾಲ, ಆನಿ, ಹರ್ಷ(ಗೂಬೆ), ಇಮ್ಮಡಿ ಹಾಗೂ ಗೋವು (ಅರವಿಂದ).

ಆ ದಿನ ಯುಗಾದಿ.....ನಮ್ಮ ಹೊಸ ಮನೆಯಲ್ಲಿ ಭರ್ಜರಿಯಾಗಿ ಹಬ್ಬ ಮಾಡಿ....ಆನಿ ಮನೆ ಹತ್ತಿರ ಹೋದಾಗ...ಪುರಾತನ ಗೆಳೆಯ Sri Krishna (ಹೈದರಾಬಾದ್ dell ಅಂಗಡಿಯಲ್ಲಿ ಇವನ ಕೆಲಸ) ಇದ್ದ. ನೋಡಿ ಖುಷಿ ಆಯ್ತು.

ನೆಟ್ಟಕಲ್ಲಪ್ಪ ಸರ್ಕಲ್ ನ ಗಣಪನಿಗೆ ನಮಿಸಿ ಹೊರಟಾಗ ಗಂಟೆ ೮ : ೩೦ ದಾಟಿತ್ತು. ಹೊಸೂರಿನ ಹೊಟೆಲ್ ಒಂದರಲ್ಲಿ ಹೊಟ್ಟೆಪೂಜೆ ಮುಗಿಸಿ, ತಮಿಳು ನಾಡಿಗೆ ಕಾಲಿಡಲು ೭೫೦/- ಕುಕ್ಕಿ, ಗಾಡಿ ಮುಂದೆ ಸಾಗುತ್ತಿತ್ತು. ಹರಟೆ, ಟೀಕೆ, ಕೇಕೆಗಳು ಎಗ್ಗಿಲ್ಲದೆ ಹರಿಯುತ್ತಿದ್ದವು. ಜೊತೆಗೆ mp3 ಒಳಗಿನ ನಿನಾದ Sony Xplod ನಿಂದ.... :-)



ಪ್ರಯಾಣ ನಿಜವಾಗಿಯೂ ಆರಾಮಾಗಿತ್ತು. ಒಳ್ಳೆ ಗಾಡಿ ಮಾಡಿದ್ದಕ್ಕೆ ಆನಿಗೆ thanks.

ಅಂದುಕೊಂಡ ಹಾಗೆ, ಕೊಡೈ ಕೆನಾಲ್ ತಲುಪಿದಾಗ ಮುಂಜಾನೆ ೮:೩೦. ಆಹಾ...ಇಳಿಯುತ್ತಿದ್ದಂತೆ ಆ ತಂಪಿನ ಸಿಂಚನ...ಹಾಯ್ ಎನಿಸುವಂತೆ.... Golden Parks Inn ನ ಒಳ ಹೊಕ್ಕು, ೩ deluxe rooms ನ ಇಣುಕಿದೆವು. ಚೆನ್ನಾಗಿತ್ತು. ಹಾಗೆ fresh ಆಗಿ, ಹಾಗೆ ಹೀಗೆ ಕಣ್ಣಾಡಿಸಿದಾಗ ಕಾಣಿಸಿದ್ದು ಬರೀ ಆಗ ತಾನೇ ದಾಂಪತ್ಯ ಬದುಕಿಗೆ ಕಾಲಿರಿಸಿದ ಯುವdumಪತಿಗಳು. ಆಹಾ... ಆ ಸೀನ್ ಗಳನ್ನ ನೋಡಬೇಕ್ರೀ.... ಏನ್ lovesu...ಏನ್ ಕತೆ.... ಒಂದು ವಿಷಯ ತಲೆಗೆ ಬರ್ತಾ ಇತ್ತು... ಇವ್ರೆಲ್ಲಾ ಜೀವನ ಪೂರ್ತಿ ಹೀಗೇ ಇದ್ರೆ Lawyers ಅಂತಾ ಇರೋವರೆಲ್ಲಾ ಕೆಲಸ ಕಳ್ಕೊಂಡಿರವ್ರು :-)

ಅಲ್ಲೇ ಹೊಟೆಲ್ನಲ್ಲಿ ತಿಂಡಿ ಮುಗಿಸಿ, ವಾಕ್ ಹೊರಟ್ವಿ ಪಾಪ ನಮ್ಮ ಆನಿ ಗೆ altitude change ಆಗ್ತಿದ್ದ ಹಾಗೆ ಅನಾರೋಗ್ಯನೂ ಶುರು. ತಿಂದ್ರಾಗದು, ಕೂತ್ರಾಗದು, ನಿಂತ್ರಾಗದು. ಅಂತೂ ಪಾಪ ಕಷ್ಟ ಪಟ್ಟು lake ವರೆಗೂ ಬಂದ. ಅಲ್ಲಿ ಇತ್ತು ಮಜಾ...ಬೋಟಿಂಗ್....ಕುದುರೆ ಸವಾರಿ....ಸೈಕಲಿಂಗ್....ಕುದುರೆ ಸವಾರಿ ಮಸ್ತ್ ಮಜಾ ಬಂತು. ನಂತರ Astoria ಹೊಟೆಲ್ ನಲ್ಲಿ ಊಟ ಮುಗಿಸಿ, tavera ತಗೊಂಡು... 3 pillar rocks, Green valley view and coakers walk ನೋಡಿದ್ವಿ. ಒಂದೊಂದೂ ಮಸ್ತ್ ಜಾಗಗಳು. ಎಲ್ಲಾ ಕಡೆ ಮಂಜು ಮುಸುಕಿನ ಕಣ್ಣಾ ಮುಚ್ಚಾಲೆ. Green valley view ನ suicide point ಅಂತಾನೂ ಕರೀತಾರೆ. ಮನ ಮೋಹಕ ಸುಂದರ ಸ್ಥಳ. ಎಚ್ಚರ ತಪ್ಪಿದರೆ ಅಷ್ಟೇ ಅಪಾಯ ಕೂಡ. ಇಲ್ಲಿ ಒಂದು ವಿಷಯ ಹೇಳಲೇ ಬೇಕು. ಇಂಥಾ ಜಾಗಗಳಿಗೆ ಹೋದಾಗೆಲ್ಲಾ, ಈ ಗೂಬೆ ಮಂಗನ ಥರಾ ಆಡೋದಕ್ಕೂ, ಈ ದನ ಕಿರುಚಿ ಕಿರುಚಿ ಎಲ್ಲರಿಗೂ tense ಮಾಡಕ್ಕೂ...ಅಬ್ಬಾ ಸಾಕು ಸಾಕಾಗಿ ಹೊಯ್ತು. ಇಲ್ಲಿ ಶಾಪಿಂಗ್ ಮಾಡಕ್ಕೆ ತುಂಬಾ ಅಂಗಡಿಗಳು ಸಿಗುತ್ತವೆ. ನಾನೂ ಅದೂ ಇದೂ ತಗೊಂಡೆ.


ಅಲ್ಲಿಂದ ಸ್ವಲ್ಪ ದೂರದಲ್ಲೇ ಸಿಗುತ್ತೆ Coakers walk. Coaker ಅಂತಾ ಬ್ರಿಟಿಷ್ ನ ನಂತರ ಇಟ್ಟ ಹೆಸರು. ವಾಕಿಂಗ್ ಮಾಡಲು ಒಳ್ಳೇ ಜಾಗ. ತಣ್ಣನೆ ಗಾಳಿ ಆಹ್ಲಾದಕರ ವಾತಾವರಣ.... ನೀರವತೆ...ಆಹ್...ಅನುಭವಿಸಬೇಕು. ಇಲ್ಲಿ ತಮಿಳುನಾಡು ಸರ್ಕಾರದವರು ಉತ್ತಮ ನಿರ್ವಹಣಾ ಕೆಲಸಗಳನ್ನು ಮಾಡಿದ್ದಾರೆ. ಒಂದು telescope ಕೂಡ ಇದೆ. ತಲೆಗೆ ೩ ರೂಪಾಯಿ ತೆತ್ತರೆ telescope ನ ಉಪಯೋಗಿಸಬಹುದು. ನಾವೂ ೪ ಜನ ನೋಡಿದ್ವಿ. ಆದರೆ ಆ ಮನುಷ್ಯ ರಸೀದಿ ಮಾತ್ರ ಕೊಡ್ಲಿಲ್ಲ. ಹಮ್...ಆದರೆ view ಚೆನ್ನಾಗಿತ್ತು.

ಕೊಡೈ ನ ಮತ್ತೊಂದು ವಿಶೇಷ ಅಂದ್ರೆ ಅಲ್ಲಿನ ಕ್ಯಾರಟ್. ಎಲ್ಲಾ ಕಡೆ ಮಾರುತ್ತಾ ಇರ್ತಾರೆ. ಸಣ್ಣ ಸಣ್ಣ ಬೆರಳು ಗಾತ್ರದ ಕಡುಗೆಂಪು ಬಣ್ಣದ ಕ್ಯಾರಟ್ ಗಳು. ನಾನಂತೂ ಮನದಣಿಯೆ ತಿಂದೆ :-)

ಇಲ್ಲಿಂದ ಸಿಟಿ ಒಳಗಿರೋ ಟೂರಿಸ್ಟ್ ಪಾಯಿಂಟ್ ಗೆ ಬಂದು ನಾಳೆಯ trekking ಬಗ್ಗೆ ವಿಚಾರಿಸಿದ್ವಿ. ಅಲ್ಲಿನ ಸರ್ಕಾರಿ (ಅಂತಾ ಹೇಳ್ಕೊಳೊ) ಗೈಡ್ ನ ಮಾತಾಡಿಸ್ದಾಗ...ಓಹೋ ಇವನು ಬರೀ ವಿದೇಶಿಗಳಿಗೆ ಮಾತ್ರ ಅಂತಾ ಕಾಣುತ್ತೆ ಅನ್ನಿಸ್ತು. ಬಾಯಿ ತೆಗೆದ್ರೆ ತಮಿಳ್ mixed ಬ್ರಿಟಿಷ್ accent ನಲ್ಲಿ, ಡಾಲರ್ಸ್ ಅಂಡ್ ಪೌಂಡ್ಸ್ ಅಂತಿದ್ದ. ನಮಗೋಸ್ಕರ ಅಂತಾ ತಲಾ ೩೦೦ ಹೇಳಿದ discount ಕಳೆದು. ಅಲ್ಲೇ ನಮಸ್ಕಾರ ಹೇಳಿ ಬೆಳಗ್ಗೆ ನೋಡಿದರಾಯ್ತು ಅಂತಾ ರೂಮ್ ಗೆ ಬಂದು, ಹರಟೆ ಹೊಡ್ಕೊಂಡು, ಗೂಬೆನ ಗೋಳು ಹೊಯ್ಕೊತಾ ... ಹಾಗೆ ನಿದ್ದೆ :-) (ಹೇಗೂ ಕುಂಬಕರೈ ಜಲಪಾತ trek ಅಂತಾ ತೀರ್ಮಾನ ಆಗಿತ್ತು)

ಬೆಳಗ್ಗೆ ೮ ಗಂಟೆಗೆ ಸಕ್ಕರೆ ನಿದ್ದೆ... ಆಹಾ...ಎಂಥಾ ಸುಖ...ಅಷ್ಟರಲ್ಲಿ ಬಂದ, ಈ ಗೋವು ಅಂಬಾ ಅಂದ್ಕೊಂಡು!!!! ಹಿಡ್ಕೊಂಡ್ ನಾಲ್ಕು ಬಾರಿಸೋಣ ಅಂತಾ ಅನ್ನಿಸಿದ್ರೂ, trekking ನ ನೆನಪು ಬಂದು, ಎದ್ದೆ. ಚುಮು ಚುಮು ಚಳಿಯಲ್ಲಿ ಒಮ್ಮೆ ಹೊಟೆಲ್ ನ ಹೊರ ಹೋಗಿ ಬಂದು, ಬಿಸಿ ಹಬೆಯಾಡುವ ಕಾಫಿ ಹೀರಿ, ಬಿಸಿ ಬಿಸಿ ನೀರಿನ ಜಳಕ ಮುಗಿಸಿ, ಎಲ್ಲಾ ರೆಡಿ ಆದಾಗ ೯:೩೦. ಆಪದ್ಭ್ಹಾಂದವನಂತೆ ಸಿಕ್ಕಿದ ಡೆನ್ನಿಸ್. ಅವನೇ ನಮ್ಮ ಗೈಡ್. ಆನಿ ಆರೊಗ್ಯದ ಕಾರಣ ರೂಮ್ ನಲ್ಲೇ ಉಳ್ಕೊಂಡ. ಬೇಗ ಬಂದುಬಿಡ್ರೊ ..ಕಾಯ್ತಿರ್ತೀನಿ ಅಂತಾ ಟಾಟಾ ಮಾಡಿದ ಪಾಪ.

ಮಿಕ್ಕಿದ ನಾವು ೬ ಮಂದಿ ಹೊರಟ್ವಿ ನೋಡಿ ಅಲ್ಲಿಂದ. coakers walk ನ ಕೆಳಭಾಗದಿಂದ ಶುರು. ಶುರುವಿನಲ್ಲೇ ಭಯಾನಕ ಕಂದಕಗಳು. ಒಂದೇ ಹೆಜ್ಜೆ ಇದುವಷ್ಟು ಜಾಗ ಇರುವ ಕಾಲುದಾರಿ. ಬರು ಬರುತ್ತಾ ಸ್ವಲ್ಪ ಸುಲಭ ವಾಯಿತು. ಆದರೂ ಒಂದು ಕ್ಷಣ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ.
ನಾನಂತೂ ಮೈಯೆಲ್ಲಾ ಕಣ್ಣಾಗಿಸ್ಕೊಂಡು ನಡೀತಾ ಇದ್ದೆ. ಗೂಬೆ ಮಾತ್ರ ಗೊತ್ತಲ್ಲ...ಎಲ್ ಎಲ್ಲ್ಲೊ ಹಾರಾಡ್ತಾ ಇದ್ದ. ಇಲ್ಲಿ ಗೋವು ಕಿರುಚಿ ಸಾಯ್ತಿರವ್ನು. ಹೀಗೆ ಇದು trekking ಪೂರ್ತಿ ನಡೀತಾನೇ ಇತ್ತು. ನಮ್ಮ ಡೆನ್ನಿಸ್ ಸಿಕ್ಕ ಗಿಡ ಮರ ಜಾಗಗಳನ್ನೆಲ್ಲಾ ವಿವರಿಸ್ತಾ ಇದ್ದ. ಅವನದು ಒಂಥರಾ ತಮಿಳ್ ಹಾಗೂ ಇಂಗ್ಲಿಷ್ ಮಿಶ್ರಿತ ಭಾಷೆ .. ಆದರೂ ನಮಗೆ ಅರ್ಥ ಆಗ್ತಿತ್ತು. :-) ಪಂಬಾರ್ ಜಲಪಾತ ೦೧ ನಮ್ಮ ಮೊದಲ ವಿರಾಮ. ಫೋಟೋಸ್ ತಗೊಂಡು ಪಂಬಾರ್ ೦೨ ನೋಡ್ಕೊಂಡು, ಅಲ್ಲೇ ಒಂದು ಪೆಟ್ಟಿಗೆ ಅಂಗಡಿಯಲ್ಲಿ ಟೀ ಹಾಕ್ಕೊಂಡು ಮುಂದೆ ಹೊರಟ್ವಿ.


ಮುಂದೆ ಸಿಕ್ಕಿದ್ದು Dolphin's nose ಅಂತಾ ಒಂದು ರುದ್ರ ಭಯಾನಕ ಜಾಗ. ಇಲ್ಲಿಗೆ vehicle ನಲ್ಲಿ ಕೂಡ ಬರೋಕೆ ದಾರಿ ಇದೆ. ಇಲ್ಲಿ ಒಂದು ಕಲ್ಲು Dolphin Nose shape ನಲ್ಲಿ ಇದೆ. ಅದರ ತುದೀಗೆ ಹೋದರೆ ಸುತ್ತಾ ಯಾವ ಕಡೇನೂ ನೆಲನೇ ಕಾಣೊಲ್ಲ. ಕೆಳಗಿಂದಾ ಸತತವಾಗಿ ಮಂಜು ಉಕ್ಕುತ್ತಿರುವಂತೆ ಅನಿಸುತ್ತದೆ. ರಮಣೀಯ ಸ್ಥಳ. ನಾನು ಆ ಕಲ್ಲಿನ ತುದಿಗೆ ಹೊಗುವ ಸಾಹಸ ಮಾಡಲಿಲ್ಲ. ಎಂದಿನಂತೆ ಹರ್ಷ Vs ಗೋವು ನಡೀತು. ;-)
ಇಲ್ಲಿಂದ ದಾರಿ ಸೀದಾ ಕೆಳಮಾರ್ಗವಾಗಿ ಹೋಗುತ್ತದೆ. ೧ ಗಂಟೆ ಆಗೋ ಹೊತ್ತಿಗೆ "ವೆಳ್ಳಗವೈ" ಅಂತಾ ಒಂದು ಪುಟ್ಟ ಹಳ್ಳಿ ಯ ಬಳಿ ತಲುಪಿದ್ದೆವು.
ಒಂದು ೫೦ ಮನೆಗಳಿರಬಹುದು. ಆ ಕಾನನದ ನಡುವಿನ ಆ ಬೆಟ್ಟದ ಮೇಲಿನ ಜಾಗದಲ್ಲಿರೋ ಹಳ್ಳಿ ನೊಡೇ ಆಶ್ಚರ್ಯ ಆಗಿತ್ತು. ಅಷ್ಟು ದೂರ ನಡೆದ ಸುಸ್ತು ಕೂಡ! ನಮ್ಮ ಹಾಗೂ ಇಲ್ಲಿನ ಜನರ ಜೀವನದ ಬಗ್ಗೆ ಹಾಗೇ compare ಮಾಡಿದಾಗ...ನನ್ನ ತಲೆ ಎಲ್ಲೆಲ್ಲೋ ಓಡ್ತಾ ಇತ್ತು...huh....




ಅಲ್ಲಿ ಒಂದು ಶಾಲೆ ಕೂಡ ಇದೆ! ಆ ಶಾಲೆಯ ಬಳಿ ಕೂತು ಒಂದರ್ಧ ಗಂಟೆ ವಿರಮಿಸಿದೆವು. ನಮ್ಮಂತೆ ಬೆಂಗಳೂರಿನಿಂದ ಬಂದಿದ್ದ ಮತ್ತೊಂದು gang ಸಿಕ್ತು. ( Keertan from TKM - Bidadi) .



ಇಲ್ಲಿಂದಾ ಹೊರಟಾದ ಮೇಲೆ ಶುರು ಆಯ್ತು ನಮ್ಮ ಪಾಡು. ಗಿರೀಶ ೫ ಬಾರಿ ಕಾಲು ಉಳುಕಿಸ್ಕೊಂಡ. ನನ್ನ Reebok ಕಾಲಿಗೆ ಕೈ ಕೊಟ್ಟು ಪಾದ ಬೊಬ್ಬೆ ಬರೋಹಾಗೆ ಆಯ್ತು. ಇಮ್ಮಡಿ ಕೂಡ ಕಾಲು ಉಳುಕಿಸ್ಕೊಂಡ. ಇಲ್ಲಿ ನಮ್ಮ ಸಾಥ್ ಗೆ ಬಂದಿದ್ದು ಡೆನ್ನಿಸ್. ಪಾಪ ಹಾಗೇ ನಮ್ಮ ಜೊತೇನೇ ಕೊನೇವರೆಗೂ ನಮ್ಮನ್ನೆಲ್ಲಾ ಹುರಿದುಂಬಿಸಿಕೊಂಡು ಬಂದ.



ಬರೋ ದಾರಿಲಿ ಸಾಕಷ್ಟು ನಿಂಬೆಗಿಡಗಳು, ಪೈನ್ ಮರಗಳು, ಗೋವಾ...ಹೀಗೇ ಸಾಕಷ್ಟು ನೋಡಿದ್ವಿ. ಇನ್ನೇನು ಕುಂಬಕರೈ ಬಂದೇ ಬಿಡ್ತು ಅನ್ನೋ ಅಷ್ತ್ರಲ್ಲಿ ಕಾಣಿಸ್ತು ಒಂಟಿ Bison. ಹತ್ತಿರಾನೇ ಇದ್ರೂ ಸಧ್ಯ ಏನೂ ಮಾಡ್ಲಿಲ್ಲ. ಹಮ್.....ಕೊನೇಗೂ ಫಾಲ್ಸ್ ನ ಬಳಿ ಬಂದಾಗ ೫: ೩೦ ಏನಿಲ್ಲಾ ಅಂದ್ರೂ ೧೫, ೧೬ ಕಿ. ಮೀ. ನಡೆದಿದ್ವಿ. ಬರೀ ಇಳಿಯೋದೇ ಆದ್ರಿಂದ ನನ್ನ ಬಾಕಿ ಎಲ್ಲಾ trek ಗಳಿಗಿಂತಾ ತುಂಬಾ ಸುಸ್ತಾಗಿದ್ದೆ. ನೀರಲ್ಲಿ ಹಾಗೆ ಬಿದ್ದು ಒದ್ದಾಡಿ ಎಲ್ರೂ ರೆಡಿ ಆಗಿ ಒಂದು ಆಟೊ ಗೆ ಮಾತಾಡಿ ಅಲ್ಲಿಂದ ಪೆರಿಯಕುಳಮ್ ಅನ್ನೋ ಊರಿಗೆ ಬಂದ್ವಿ. ೮ ಕಿ. ಮೀ ಆಯ್ಥು. ಆಟೊ ನಲ್ಲಿ ೭ ಜನ ರೈಡ್ ಮಸ್ತಾಗಿತ್ತು :-) ಆಮೇಲೆ ಅಲ್ಲಿಂದಾ ವತ್ತಲಗುಂಡು ಅನ್ನೋ ಊರಿಗೆ ಬಸ್ ನಲ್ಲಿ ಒಂದರ್ಧ ಗಂಟೆ. ಬರ್ತಾ ನಾವು ಇಳಿದು ಬಂದಿದ್ದ ಬೆಟ್ಟಗಳೆನ್ನಲ್ಲಾ ಏನೋ ಸಾಧನೆ ಮಾಡಿದ ಹಾಗೆ ನೋಡಿದ್ದೋ ನೋಡಿದ್ದು. ;-)



ವತ್ತಲಗುಂಡು ನಲ್ಲಿ ಒಂದು ಹೊಟೆಲ್ ಹೊಕ್ಕು, ಸರಿಯಾಗಿ ಬಾರಿಸಿ ಕುಂಟುಕೊಂಡೇ ಬಸ್ಟ್ಯಾಂಡಿಗೆ ಬಂದ್ವಿ. ಲಾಸ್ಟ್ ಬಸ್ ಅಂತಾ ಆ ಸೆಖೆನಲ್ಲೇ, ಆ ತುಂಬು ಗರ್ಭಿಣಿಯಂತಿದ್ದ ನೀಲಿ ಬಸ್ ನ ಏರಿದ್ವಿ. ಡೆನ್ನಿಸ್ ಏನೋ deal ಮಾಡಿಸಿ ನನಗೆ ಒಂದು ಮೆಟ್ಟಿಲ ಸೀಟ್ ಕೊಡಿಸ್ದ. ಅಲ್ಲೇ ತೂಕಡಿಸ್ತಾ ಇದ್ದೆ. ೨ ೩೦ ಗಂಟೆ ಪ್ರಯಾ(ಸ)ಣ ದ ನಂತರ ಕೊಡೈ ತಲುಪಿದ್ವಿ. ಉಫ್... ಅಬ್ಬಾ ಅಂತಾ ರೂಮ್ ಗೆ ಹೊದ್ರೆ...ಕಾದಿತ್ತು. ನನ್ನ ಅಚ್ಚು ಮೆಚ್ಚಿನ wildcraft ಬ್ಯಾಗ್ ನಾಪತ್ತೆ! ಅಲ್ಲೇ ಬಸ್ ನಲ್ಲೇ ಉಳ್ಕೊಂಡಿತ್ತು. ಶುರು ಆಯ್ತು ನನ್ನ ಕಿರುಚಾಟ. ಎಲ್ಲರೂ ಹುಡುಕ್ಕೊಂಡ್ಬಂದ್ರೂ ಬ್ಯಾಗೂ ಇಲ್ಲ ಬಸ್ಸೂ ಇಲ್ಲ. :-( ಡೆನ್ನಿಸ್ ಗೆ ಫೋನ್ ಮಾಡಿ ಬೆಳಗ್ಗೆ ೮ ಗಂಟೆ ಗೆ ಬಸ್ ಸಿಗತ್ತೆ ಅಂತಾ ಗೊತ್ತಾದ್ಮೇಲೆ ನಿದ್ದೆ ಮಾಡಿದ್ವಿ. ಅಂತೂ ಗೋವು ಬೆಳಗ್ಗೆ ಹೋಗಿ ಬ್ಯಾಗ್ ತಂದಿದ್ದ. ಬಸ್ ನ ಡ್ರೈವರ್ ಕೊಟ್ಟನಂತೆ ಪುಣ್ಯಾತ್ಮ.




ಅಬ್ಬಾ...ಬೆಳಗ್ಗೆ ಏಳುತ್ತಿದ್ದ ಹಾಗೆ ಕೈ ಕಾಲುಗಳ ಎಲ್ಲಾ spare parts ಗಳು ಸೆಳೆದುಕೊಂಡು ನಡೆಯೋದೇ ಒಂದು trekking ನಂತೆ ಭಾಸವಾಗ್ತಾ ಇತ್ತು. ಈ ವಿಶಿಷ್ಟ ನೋವು ಪೂರ್ತಿಯಾಗಿ ಸರಿ ಹೋಗಲು ನನಗೆ ಒಂದು ವಾರ ಬೇಕಾಯಿತು.




ಎಲ್ಲರೂ ಎದ್ದು ರೆಡಿ ಆಗಿ ತಿಂಡಿ ಮುಗಿಸಿದಾಗ ೧೧ ಗಂಟೆ ಆಗಿತ್ತು. ರೂಮ್ check out ಮಾಡಿ, ಅಲ್ಲೇ ಶಾಪಿಂಗ್ ಅಂತಾ ಹೊರಟ್ವಿ. ಕೊಡೈ ಸ್ಪೆಷಲ್ ನೀಲಗಿರಿ ಎಣ್ಣೆ, ಹೋಮ್ ಮೇಡ್ ಚಾಕಲೇಟ್ ಗಳನ್ನೂ, ಹಣ್ಣುಗಳನ್ನೂ.....ಶಾಪಿಂಗ್ ಮುಗಿಸಿ, ಅಂತಿಮವಾಗಿ ಕೊಡೈ ಗೆ ಟಾಟಾ ಹೇಳಿದಾಗ ಮಧ್ಯಾಹ್ನ ಗಡಿಯಾರದ ಎರಡೂ ಮುಳ್ಳುಗಳೂ ಸರಿಯಾಗಿ ಗಗನದ ಕಡೆ ಮುಖ ಮಾಡಿದ್ದವು.

ಬರ್ತಾ ದಾರೀಲಿ silver cascade falls, ಮತ್ತು ಇನ್ನೊಂದು ದೂರದಲ್ಲಿ ಕಾಣುವ ಎತ್ತರದ falls ಇವೆಲ್ಲಾ ನೋಡಿಕೊಂಡು ಮಧುರೈ ಕಡೆ ಪಯಣ.

ರಣ ಬಿಸಿಲಿನ. ಕೊಡೈ ಬೆಟ್ಟಗಳ ಶ್ರೇಣಿಯ ತಪ್ಪಲಿನಲ್ಲಿ ಹೆಬ್ಬಾವಿನಂತೆ ಮಲಗಿತ್ತು highway ರಸ್ತೆ. ಅದರ ಮೇಲೆ ಡ್ರೈವರ್ ರಮೇಶನ ಸಾರಥ್ಯದಲ್ಲಿ ಲೀಲಾಜಾಲವಾಗಿ ಓಡುತ್ತಿತ್ತು ನಮ್ಮ ಬಿಳೀ tavera. :-)
ದಾರಿಯುದ್ದಕ್ಕೂ ಎಲ್ಲಾ ಬಗೆಯ ಹರಟೆಗಳು...Da vinci code na ಪೂರ್ಣ ಸಾರಾಂಶದಿಂದ ಹಿಡಿದು...tata indicom ನ ತೊಂದರೆಗಳು....ಎಲ್ಲಾ ಬಗೆಯ current affairs..private affairs...ಹೈ ಸ್ಕೂಲಿನ ಆ ಸುಮಧುರ ನೆನಪುಗಳು...ಆಹ್...ದಾರಿ ಸವೆದಿದ್ದೇ ಗೊತ್ತಾಗಲಿಲ್ಲ :-)

ಮಧುರೈ...ತಮಿಳುನಾಡಿನ ಎರಡನೇ ಅತಿ ದೊಡ್ಡ ಪಟ್ಟಣ...ತಲುಪಿದಾಗ ೩ ಗಂಟೆ. ಹೊಟೆಲ್ ಮನೋರಮಾ ನಲ್ಲಿ ಬಾಳೆ ಎಲೆ ಊಟ ಮುಗಿಸಿ, ದೇವಸ್ಥಾನ ಸಂದರ್ಶಿಸಿದೆವು. ಅತಿ ದೊಡ್ಡ ಪ್ರಾಕಾರವನ್ನು ಹೊಂದಿರುವ ಗುಡಿಯದು. ಶ್ರೀ ಮೀನಾಕ್ಷಿ ಅಮ್ಮನವರ ದರ್ಶನ ಪಡೆದು, ನಮಿಸಿ ಹೊರನಡೆದು, ಬೆಂಗಳೂರಿನ ದಾರಿ ಹಿಡಿದಾಗ ೫ ಗಂಟೆ.

ಕರೂರು, ಧರ್ಮಪುರಿ ಮಾರ್ಗವಾಗಿ ಸೇಲಂ ತಲುಪಿ, ರಾತ್ರಿ ೧೦ ಗಂಟೆ ಸುಮಾರಿಗೆ ಅಲ್ಲೇ ಧಾಬಾ ಒಂದರಲ್ಲಿ ಊಟ ಮುಗಿಸಿದೆವು. ಮಧ್ಯೆ ನಾನೂ ಕೂಡ ಸ್ವಲ್ಪ ದೂರ tavera test drive ಮಾಡಿದೆ. ಒಳ್ಳೇ ಪವರ್ ಇತ್ತು.



ಹಾಗೇ ಒಬ್ಬೊಬ್ಬರ ತೂಕಡಿಕೆ ಆಕಳಿಕೆಗಳ ನಡುವೆ, checkpost ದಾಟಿ, ವಿಶಾಲ ಕರ್ನಾಟಕಕ್ಕೆ ಪ್ರವೇಶವಾದಾಗ ನಡುರಾತ್ರಿ ೨ ೩೦. ಮೊದಲಿಗೆ ದನವನ್ನು ಕೊಟ್ಟಿಗೆಗೆ ತಲುಪಿಸಿ...ನಂತರ ನನ್ನನ್ನು ಇಳಿಸಿ ಹೊರಟರು...ನಾನು ಮರಳಿದೆ... ನನ್ನ ಮತ್ತದೇ ಮುಗ್ಧ ಲೋಕಕ್ಕೆ ... :-)

ಬೆಳಗಿನಿಂದ ಶುರು ಮತ್ತದೇ ಅಫೀಸು....ಅದೇ ಪ್ರಾಜೆಕ್ಟು... ಬಗ್ಸು...ಫಿಕ್ಸು...ಆದರೆ...no complains ;-) ನಾನೇ ಆಯ್ದುಕೊಂಡ ನನ್ನ career ;-)

ನೀವು ಆದರೆ, ಅನಿಸಿದರೆ...reply ಮಾಡಿ..(sharathjay@gmail.com)

ನಗು ನಗುತಾ ನಲಿ ನಲಿ...ಏನೇ ಆಗಲಿ :-)

--ಶರತ್




2 comments:

Susheel Sandeep said...

ಸಿವಾ ಅನ್ನುಸ್ಬುಟ್ಟಿದ್ಯಲ್ಲ ಸಿಸ್ಯಾ!
ಅಲ್ಟಿಮೇಟ್ ಮಗ...ಎಕಾಚಿಕ್ಕಿ,ಎರ್ರಾಬಿರ್ರಿ,ಐನಾತಿ ಟ್ಯಾಲೆಂಟು! ಚಿಕ್ಕುದ್ರಿಂದಾನೂ ಹಿಂಗೇನ..ಎಲ್ಲಾ ದೇವರ ಸತ್ಯ ಬಿಡು!
ಇನ್ನೂ ಏನೇನ್ ಬರೆಯೋದು...ಕೊಡೈ ಟ್ರಿಪ್ ನಿಜವಾಗ್ಲೂ ಸೂಪರ್ ಆಗಿತ್ತು.ನಾನೇ ಬಂದಂಗಿತ್ತು ಕಣೊ...
Keep up the spirit ಹೀಗೆ ಬರೀತಿರು ಮಗ ಬಿಡಬೇಡ.

Madhuri said...

mastagide kano nimma kathe.. odthaiddare nan yake nimma jote barlilla ansthaittu.. (karkondu hodare thane anta manasinalli ankondya?).. anyways gomana kirchata, goobeya galate, suicide point matte yuva-dum-pati-gala bagge odthaiddare tumba santosha aitu.. hinge trip ge hoghtairu.. kathe barithairu aita..